ಮಂಗಳೂರು:ಕರಾವಳಿ ಜಿಲ್ಲೆಗಳಲ್ಲಿ ಭಾಗಷಃ ಮೋಡ,ಬಿಸಿಲಿನ ವಾತಾವರಣ ಮುಂದುವರೆಯಲಿದ್ದು ಕಾಸರಗೋಡು,ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೊಡ ಕವಿದ ವಾತಾವರಣ ಇದ್ದು ತುಂತುರು,ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಡುಪಿ,ಉ.ಕ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಸಂಜೆ ಗುಡುಗು ಮಳೆಯಾಗಬಹುದು.ಸೆ 25ರ ನಂತರ ಮಳೆ ಕಡಿಮೆ ಆಗಬಹುದು.ಕರಾವಳಿಯ ದ.ಕ. ಕಾಸರಗೋಡಿನ ಅಲ್ಲಲ್ಲಿ ನಿನ್ನೆ ಮಧ್ಯಾಹ್ನ ರಾತ್ರಿ ಮತ್ತು ಇವತ್ತು ಬೆಳಿಗ್ಗೆ ಸಾಮಾನ್ಯ ಮಳೆಯಾಗಿದೆ.ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ,ಮಂಡ್ಯ ಮೈಸೂರು ಚಾಮರಾಜನಗರ ಬೆಳಗಾವಿ ಬಾಗಲಕೋಟೆ ಬಿಜಾಪುರ ಜಿಲ್ಲೆಗಳ ಹಲವು ಕಡೆ ಮಳೆಯಾಗಿದೆ.
ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು – ಸಣ್ಣ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು-ಗ್ರಾಮಾಂತರ ಚಾಮರಾಜನಗರ, ರಾಮನಗರ ಮೈಸೂರು ಮಂಡ್ಯ,ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಂಜೆಯ ನಂತರ ತುಂತುರು -ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ
ಇವತ್ತು ಮೋಡ- ಸಾಧಾರಣ ಮಳೆ ಬರುವ ಮುನ್ಸೂಚನೆ ಇದೆ. ಕಲ್ಬುರ್ಗಿ ಬೀದರ್ ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಯಾದಗಿರಿ ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳಲ್ಲಿ ತುಂತುರು – ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಮುಂದಿನ 3 ದಿನ ಉತ್ತಮ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಮಧ್ಯ ಬಂಗಾಳಕೊಲ್ಲಿಯ ಲೋ ಪ್ರೆಷರ್ ಆಗಲಿದ್ದು ಇದು ಸೆ 23ಕ್ಕೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಮೂಲಕ ಭೂಭಾಗ ಪ್ರವೇಶಿಸುವ ಸಾಧ್ಯತೆ ಇದೆ. ನಂತರ ದುರ್ಬಲ ಆಗುವ ಸಾಧ್ಯತೆ ಇರುವುದರಿಂದ ಸೆ 25 ರ ನಂತರ ರಾಜ್ಯದಲ್ಲಿ ಮಳೆ ಪೂರ್ತಿ ಕಡಿಮೆ ಆಗಬಬಹುದು ಎಂದು ಮುನ್ಸೂಚನೆ ನೀಡಿದೆ.








