ಸುಳ್ಯ:ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷರಾಗಿ ಪವಿತ್ರನ್ ಗುಂಡ್ಯ ಆಯ್ಕೆಯಾಗಿದ್ದಾರೆ. ತೀಯ ಸಮಾಜ ಭವನ ಉದ್ಯಾವರ ಮಾಡ ಕುಂಜತ್ತೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆಯಿತು. ಇವರು
ಭಾರತೀಯ ತೀಯ ಸಮಾಜ ವಲಯ ಸಮಿತಿ ಸುಳ್ಯ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪವಿತ್ರನ್ ಗುಂಡ್ಯ ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ವಯನಾಟ್ ಕುಲವನ್ ದೈವoಕಟ್ಟು ಮಹೋತ್ಸವಗಳಲ್ಲಿ ಪದಾಧಿಕಾರಿಯಾಗಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುತ್ತಾರೆ.ಕೇಂದ್ರ ಸಮಿತಿಯ ಮಹಾಸಭೆಯಲ್ಲಿ ಸುಳ್ಯ ವಲಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು ಎಂದು ಸುಳ್ಯ ತೀಯ ಸಮಾಜದ ಪ್ರಕಟಣೆ ತಿಳಿಸಿದೆ.






