ಸುಳ್ಯ:ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ಲೈನ್ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದು ವಿದ್ಯುತ್ ಕೈಕೊಟ್ಟಿದೆ. ಸುಳ್ಯ ಬೊಳುಬೈಲಿನಲ್ಲಿ ಲೈನ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಸಂಜೆ 5.30ರ ವೇಳೆಗೆ
ವಿದ್ಯುತ್ ಕಡಿತಗೊಂಡಿದೆ. 5.30ಕ್ಕೆ ಕಡಿತಗೊಂಡ ವಿದ್ಯುತ್ 9 ಗಂಟೆಯಾದರೂ ಬಂದಿಲ್ಲ. ಅರ್ಧ ಗಂಟೆಯಲ್ಲಿ ವಿದ್ಯುತ್ ಸರಬರಾಜು ಸಾಧ್ಯವಾಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಸುಳ್ಯ ನಗರ ಹಾಗೂ ಗ್ರಾಮಗಳು ಸೇರಿದಂತೆ ಸುಳ್ಯ ತಾಲೂಕಿನಾದ್ಯಂತ ಮೂರು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದು ಕತ್ತಲಲ್ಲಿ ಕಳೆಯುವಂತಾಗಿದೆ. ನೀರಿಗೂ ತತ್ವಾರ ಉಂಟಾಗಿದೆ.














