ಸುಳ್ಯ:ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಕುರಿತು ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ. ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲ ಎಂದು ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ತಿಂಗಳ ಕಾಲ ಶಿವಕೃಪಾ ಕಲಾಮಂದಿರದಲ್ಲಿ ನಡೆದ
ಶ್ರಿ ಕೇಶವಕೃಪಾ ವೇದ -ಯೋಗ-ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮಲ್ಲಿ ಅಡಗಿರುವ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಗಳು ಬದುಕಿನ ಯಶಸ್ಸಿಗೆ ಅತ್ಯಗತ್ಯ. ಗುರುಗಳು ನೀಡುವ ಅಮೂಲ್ಯವಾದ ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯು ನಮ್ಮ ಆತ್ಮವನ್ನು ಜಾಗೃತಗೊಳಿಸುತ್ತದೆ. ಶ್ರೀ ಕೇಶವಕೃಪಾ ಈ ಕಾರ್ಯದ ಮೂಲಕ ದೇಶಕ್ಕೆ ಸಂಸ್ಕಾರಯುತ ಮಕ್ಕಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿಯ ಚಾರ್ಟರ್ಡ್ ಎಕೌಂಟೆಂಟ್ ಈಶ್ವರ ಭಟ್ ಮಿತ್ತೂರು ವಹಿಸಿದ್ದರು.ಖ್ಯಾತ ಸಂಸ್ಕೃತ ಮತ್ತು ಗಮಕ ವಿದ್ವಾಂಸರಾದ ಡಾ.ಎಂ.ಎಸ್. ಸನತ್ಕುಮಾರ್ ಶರ್ಮ ಸೋಮಯಾಜಿ ಮತ್ತೂರು ಸಮಾರೋಪ ಭಾಷಣ ಮಾಡಿದರು.ಮುಖ್ಯ ಅತಿಥಿಯಾಗಿ ಉದ್ಯಮಿ ದಂಬೆಮೂಲೆ ಪುರುಷೋತ್ತಮ ಭಟ್ ಮಡಿಕೇರಿ ಹಾಗೂ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಲ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು ಭಾಗವಹಿಸಿದ್ದರು.
ಇದೇ ವೇಳೆ ಪೂರ್ಣ ಹಾಜರಾತಿ ಮತ್ತು ಪ್ರತಿಭಾನ್ವಿತ ಶಿಬಿರಾರ್ಥಿಗಳಿಗೆ ಸರ್ವ ಪ್ರಥಮ ಪುರಸ್ಕಾರ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸನ್ಮಾನಿತರ ಪಟ್ಟಿಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಪುರೋಹಿತ ನಾಗರಾಜ ಭಟ್ ವಾಚಿಸಿದರು, ವೇ.ಮೂ. ಋತುರಾಜ ಪಾಂಡೆ ಮತ್ತು ಬಳಗ ವೈದಿಕ ಪ್ರಾರ್ಥನೆ ನೇರವರಿಸಿದರು, ವೇ.ಮೂ.ಸುದರ್ಶನ ಭಟ್ ಉಜಿರೆ ಸ್ವಾಗತಿಸಿದರು, ವೇ.ಮೂ.ಅಭಿರಾಮ ಭಟ್ ವಂದಿಸಿದರು.ಉದಯ ಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ನಾಗರಾಜ ಭಟ್, ಯಶಸ್ವಿ ಪಿ ಭಟ್ ಸಹಕರಿಸಿದರು.













