ತಿರುವನಂತಪುರಂ: ಕೇರಳ ರಾಜ್ಯ ಲಾಟರಿಯ ವಿಷು ಬಂಪರ್ ಡ್ರಾ ಮೇ.23 ರಂದು ನಡೆಯಿತು.VB 135452 ಎಂಬ ಸಂಖ್ಯೆಯ ಟಿಕೆಟ್ಗೆ 12 ಕೋಟಿಯ ಬಹುಮಾನ ಬಂದಿದೆ. ಈ ಬಹುಮಾನವನ್ನು ಕೊಲ್ಲಂ ಜಿಲ್ಲೆಯ ಕರುನಾಗಪ್ಪಳ್ಳಿಯ ಆನಯಡಿ ವಯಲಿಲ್ ಪೊನ್ನನ್ (76) ಗೆದ್ದಿದ್ದಾರೆ. ಅವರ ಪತ್ನಿ ರಾಧಾಮಣಿ ಅಮ್ಮ ಹಾಗು
ಅವರ ಮಗ ವಿನೋದ್ ಕುಮಾರ್ ಇಬ್ಬರೂಲಾಟರಿ ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ.
ಅವರ ಮಗ ವಿನೋದ್ ಕುಮಾರ್ ಪಳನಿ ದರ್ಶನಕ್ಕೆ ಹೋದ ದಿನ, ಅವರ ತಂದೆ ಪೊನ್ನನ್ ಮನಪಲ್ಲಿಯಲ್ಲಿರುವ ಏಜೆನ್ಸಿಗೆ ಬಂದವರು ಅಂಗಡಿಯ ಮುಂದೆ ಮಾರಾಟಕ್ಕಿಟ್ಟಿದ್ದ ಟಿಕೆಟ್ ಒಂದನ್ನು ಖರೀದಿಸಿದ್ದರು. ಆ ಟಿಕಟ್ಗೆ ಅದೃಷ್ಟ ಒಲಿದು ಬಂದಿದೆ. ಎರಡನೇ ಬಹುಮಾನ ಆರು ಜನರಿಗೆ ತಲಾ ಒಂದು ಕೋಟಿ ರೂ.ಸೇರಿ ಹಲವು ಬಹುಮಾನಗಳು ದೊರೆಯಲಿದೆ.ಈ ಬಾರಿ ಮುದ್ರಿಸಲಾದ ಎಲ್ಲಾ 45 ಲಕ್ಷ ಟಿಕೆಟ್ಗಳನ್ನು ಏಜೆಂಟ್ಗಳಿಗೆ ಮಾರಾಟ ಮಾಡಲಾಗಿದೆ ಎಂದು ಲಾಟರಿ ಇಲಾಖೆ ತಿಳಿಸಿತ್ತು.














