ನವದೆಹಲಿ: ಪೆಟ್ರೋಲ್ ದರವನ್ನು ದೇಶದಾದ್ಯಂತ ಲೀಟರ್ಗೆ 2.61 ಹಾಗೂ ಡೀಸೆಲ್ ದರವನ್ನು 2.71 ಏರಿಕೆ ಮಾಡಲಾಗಿದೆ. ಆ ಮೂಲಕ ಎರಡು 11 ದಿನದಲ್ಲಿ ನಾಲ್ಕನೇ ಸಲ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಮೇ 15ರಿಂದ ಇಂಧನ ಬೆಲೆಯನ್ನು
ಹೆಚ್ಚಿಸುತ್ತಿವೆ. ಇದಕ್ಕೂ ಮೊದಲು ಸರಿಸುಮಾರು ನಾಲ್ಕು ವರ್ಷ ಇಂಧನ ಬೆಲೆ ಏರಿಕೆಯಾಗಿರಲಿಲ್ಲ.ಇದೀಗ ಮೇ 15ರಿಂದ ಇಂಧನ ಬೆಲೆ ಏರಿಕೆಯ ನಂತರ 11 ದಿನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಸರಿಸುಮಾರು 8 ರೂರಷ್ಟು ಜಾಸ್ತಿ ಆದಂತಾಗಿದೆ.
ಸುಳ್ಯದಲ್ಲಿ ಪೆಟ್ರೋಲ್ ದರ 110.95 ಹಾಗು ಡೀಸೆಲ್ ದರ 98.82ಕ್ಕೆ ಏರಿಕೆಯಾದಂತಾಗಿದೆ.ಸುಳ್ಯ ನಗರದಲ್ಲಿ ಮೇ.15 ಕ್ಕಿಂತ ಮೊದಲು ಪೆಟ್ರೋಲ್ ದರ 102.98 ಹಾಗು ಡೀಸೆಲ್ ದರ 91.01 ಇತ್ತು. 11 ದಿನದಲ್ಲಿ 8 ರೂ ಏರಿದೆ.














