ಸುಳ್ಯ:ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್ಗಳ ಅಪೂರ್ವ ಸಂಗ್ರಹದೊಂದಿಗೆ ಸ್ಟಾರ್ ಟೈಲ್ಸ್ ಮಳಿಗೆ ಸುಳ್ಯದಲ್ಲಿ ಜೂ.1ರಂದು ಶುಭಾರಂಭಗೊಳ್ಳಲಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಗುಣಮಟ್ಟದ ಟೈಲ್ಸ್ಗಳ 730ಕ್ಕೂ ಅಧಿಕ ಮನಮೋಹಕ ಡಿಸೈನ್ಗಳ ಟೈಲ್ಸ್ಗಳನ್ನು ಒಳಗೊಂಡ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿಯೇ ಅತೀ ದೊಡ್ಡದು ಎನ್ನಬಹುದಾದ ಟೈಲ್ಸ್ ಮಾರಾಟ ಮಳಿಗೆ ಸುಳ್ಯ ನಗರದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯ ಎಂ.ಕೆ.ರೆಸಿಡೆನ್ಸಿಯಲ್ಲಿ 2026 ಜೂ.1 ರಂದು
ಶುಭಾರಂಭಗೊಳ್ಳಲಿದೆ. ಕಳೆದ ಎರಡು ದಶಕಗಳಿಂದ

ಟೈಲ್ಸ್ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿ ಕೇರಳದಲ್ಲಿ ಮನೆ ಮಾತಾಗಿರುವ ಕಾಸರಗೋಡು ಚರ್ಕಳ ಮೂಲದ ಉದ್ಯಮಿ ರಿಯಾಝ್ ಪಿ.ಬಿ.ಮಾಲಕತ್ವದ ಸ್ಟಾರ್ ಟೈಲ್ಸ್ ಉದ್ಯಮ ಸುಳ್ಯಕ್ಕೆ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸುತಿದೆ.ಸುಳ್ಯ, ಪುತ್ತೂರು, ಮಡಿಕೇರಿ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗಿನ ಭಾಗಗಳಿಂದ ಹಲವಾರು ಮಂದಿ ಗ್ರಾಹಕರು ಮನೆ, ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಟೈಲ್ಸ್ ಖರೀದಿಗಾಗಿ ಕಾಸರಗೋಡಿಗೆ ತೆರಳುತ್ತಾರೆ.ಗ್ರಾಹಕರ ಬೇಡಿಕೆಯನ್ನು ಮನಗಂಡು ಇದೀಗ ಕರ್ನಾಟಕದ ಗ್ರಾಹಕರ ಅನುಕೂಲಕ್ಕಾಗಿ ಸುಳ್ಯದಲ್ಲಿ ಅತ್ಯಂತ ವಿಶಾಲ ಮಳಿಗೆಯನ್ನು ತೆರೆಯಲಾಗುತ್ತದೆ.

ಗ್ರಾಹಕರ ಆಯ್ಕೆಯ ಟೈಲ್ಸ್ಗಳನ್ನು ಕ್ಲಿಪ್ತ ಸಮಯದಲ್ಲಿ ಸರಬರಾಜು ಮಾಡಲಾಗುವುದು ಎಂದು ಸ್ಟಾರ್ ಟೈಲ್ಸ್ನ ಮಾಲಕರಾದ ರಿಯಾಝ್.ಪಿ.ಬಿ ಅವರು ತಿಳಿಸಿದ್ದಾರೆ.ಅದಕ್ಕಾಗಿ ಸುಮಾರು 9 ಸಾವಿರ ಚದರ ಅಡಿ ವಿಸ್ತಾರವಾದ ಸ್ಥಳ ಒಳಗೊಂಡಿರುವ ಶೋರೂಮ್ನಲ್ಲಿ ವಿವಿಧ ವಿನ್ಯಾಸ ಮತ್ತು ಗುಣಮಟ್ಟದ ಟೈಲ್ಸ್ಗಳನ್ನು ಡಿಸ್ಪ್ಲೇ ಮಾಡುವ ಮೂಲಕ ಟೈಲ್ಸ್ಗಳ ಅದ್ಭುತ ಲೋಕವನ್ನು ತೆರೆಯಲಾಗಿದೆ. ಜೊತೆಗೆ ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ.ಟೈಲ್ಸ್ಗಳ ಜೊತೆಗೆ ಸಾನಿಟರಿ, ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸದ ಎಲ್ಲಾ ಉಪಕರಣಗಳು ಇಲ್ಲಿ ಲಭ್ಯವಿದೆ.

ಟೈಲ್ಸ್ಗಳ ಅದ್ಭುತ ಲೋಕ:
ಸ್ಟಾರ್ ಟೈಲ್ಸ್ನ ನೂತನ ಶೋರೂಮ್ನಲ್ಲಿ ಟೈಲ್ಸ್ಗಳ ವಿಸ್ಮಯ ಲೋಕ ಅನಾವರಣಗೊಂಡಿದೆ.ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್ಗಳು ಸೇರಿ ಎಲ್ಲಾ ಕಂಪೆನಿಗಳ ಪ್ರಮುಖ ಬ್ರಾಂಡ್ಗಳ ಟೈಲ್ಗಳು ಇಲ್ಲಿ ಲಭ್ಯವಿರಲಿದೆ. ಅಂತಾರಾಷ್ಟ್ರೀಯ ಬ್ರಾಂಡ್ಗಳಾದ ಕಝಾರಿಯ, ರಾಕ್ ಸೆರಾಮಿಕ್ಸ್, ಜಾನ್ಸನ್, ಸೋಮಾನಿ, ನಿಡ್ಕೋ, ಕ್ರಿಯೆನ್ಸಾ ವರ್ಮೋರಾ, ಬೋಪೋ ಗ್ರಾನಿಟೊ, ಬೋನ್ಸಾ, ಫ್ಯಾವಿಯೇಟ್, ಮಿಲೇನಿಯಮ್, ಓಯಸಿಸ್, ಇಟಾಲಿಕಾ, ಸಿಮೋನ್ಸಾ ಸೇರಿದಂತೆ ಎಲ್ಲಾ ಟೈಲ್ಸ್ಗಳು ಇಲ್ಲಿ ಲಭ್ಯವಿದೆ.
ಜೊತೆಗೆ ಪ್ರಸಿದ್ಧ ಕಂಪೆನಿಗಳ ಗಮ್ಗಳು ಲಭ್ಯ. ಮೈಕ್ ಲ್ಯಾಟ್ರಿಕೇಟ್, ಪಿಡ್ಲೈಟ್ ರೋಫ್ ಫೆವಿಕಾಲ್, ಕಝಾರಿಯಾ, ಗ್ರೇಸ್ಬರ್ಗ್ ಹೀಗೆ ಖ್ಯಾತ ಕಂಪೆನಿಗಳ ಗಮ್ಗಳನ್ನು ಸ್ಟಾರ್ ಟೈಲ್ಸ್ ಶೋರೂಮ್ನಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ದೊರೆಯಲಿದೆ.

ಎಲ್ಲಾ ತರಹದ ಸಾನಿಟರಿ ಉಪಕರಣಗಳು, ಇಲೆಕ್ಟ್ರಿಕಲ್ ಐಟಂಗಳು ಲಭ್ಯವಿದೆ. ಬಾತ್ರೂಮ್ ಫಿಟ್ಟಿಂಗ್ಸ್, ಕಿಚನ್ ಸೆಟ್ಟಿಂಗ್ಸ್, ಕ್ಲೋಸೆಟ್, ಕೊಮ್ಮೊಡೊ, ವಾಶ್ ಬೇಸಿನ್, ಪೈಪ್ಗಳು, ಶವರ್, ಬಾತ್ ಟಬ್, ವಾರ್ಡ್ರೂಬ್ಸ್ ಹೀಗೆ ಎಲ್ಲಾ ತರಹದ ಸಾನಿಟರಿ, ಇಲೆಕ್ಟ್ರಿಕಲ್, ಪ್ಲಂಬಿಂಗ್ ಐಟಂಗಳು ಲಭ್ಯವಿದೆ. ಜಾಗ್ವಾರ್, ಕ್ಯಾರೊವಿಟ್(ಕಜಾರಿಯಾ), ಸೋಮಾನಿ ಮತ್ತಿತರ ಪ್ರಮುಖ ಕಂಪೆನಿಗಳ ಐಟಂಗಳನ್ನು ಸರಬರಾಜು ಮಾಡಲಾಗುತ್ತದೆ. ಫಿನೋಲೆಕ್ಸ್ ಪೈಪ್ಗಳು, ಪೈಪ್ ಸೆಟ್ಟಿಂಗ್ಗಳು, ಪಿವಿಸಿ, ಸಿಪಿವಿಸಿ, ಯುಪಿವಿಸಿ, ಎಲ್ಲಾ ತರಹದ ಪೈಪ್ಗಳು, ಪೈಪ್ ಪಿಟ್ಟಿಂಗ್ಸ್ಗಳು ಲಭ್ಯವಿದೆ.ಇಲೆಕ್ಟ್ರಿಕಲ್ ಐಟಂಗಳಲ್ಲಿಪಾಲಿಕ್ಯಾಬ್, ಅಪ್ಪರ್, ಸ್ನಿಡ್ಲರ್, ಓರಿಯಂಡ್, ಹಾವೆಲ್ಸ್ ಮತ್ತಿತರ ಕಂಪೆನಿಗಳ ಐಟಂಗಳು ದೊರೆಯುತ್ತದೆ.

ಎರಡು ದಶಕಗಳ ಅನುಭವ:
ಟೈಲ್ಸ್,ಸಾನಿಟರಿ, ಇಲೆಕ್ಟ್ರಿಕಲ್ ಐಟಂಗಳ ಉದ್ಯಮಗಳಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದೆ. ಸ್ಟಾರ್ ಟೈಲ್ಸ್ನ ಮಾಲಕ ರಿಯಾಝ್.ಪಿ.ಬಿ. ಅವರ ನೇತೃತ್ವದಲ್ಲಿ 2009 ರಲ್ಲಿ ಚೆರ್ಕಳದಲ್ಲಿ ಆರಂಭಗೊಂಡಿತು. ಬಳಿಕ ಚೆರ್ಕಳದಲ್ಲಿ 2017ರಲ್ಲಿ ಸ್ಟಾರ್ ಜನರಲ್ ಟ್ರೇಡಿಂಗ್, 2021 ರಲ್ಲಿ ಫ್ರೀಝೋನ್ ಎಲ್ಎಲ್ಸಿ, 2023ರಲ್ಲಿ ಸೀತಾಂಗೋಳಿಯಲ್ಲಿ ಸ್ಟಾರ್ ಎಲ್ಎಲ್ಸಿ, ಆರಂಭಗೊಂಡಿತು. ಇದೀಗ ಸುಳ್ಯದಲ್ಲಿಯೂ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸುತಿದೆ.

ಫ್ಯಾಕ್ಟರಿಯಿಂದ ನೇರ ಗ್ರಾಹಕರಿಗೆ:
ಫ್ಯಾಕ್ಟರಿಂದ ಸ್ಟಾರ್ ಟೈಲ್ಸ್ ಮಳಿಗೆಗೆ ಅಲ್ಲಿಂದ ಗ್ರಾಹಕರಿಗೆ ನೇರವಾಗಿ ಟೈಲ್ಸ್ ನೀಡುವುದು ಇವರ ವಿಶೇಷತೆ. ಸ್ಟಾರ್ ಶೋರೂಮ್ ಸೂಚಿಸಿದ ವಿನ್ಯಾಸ, ಬಣ್ಣ, ಗುಣಮಟ್ಟದ ಟೈಲ್ಸ್ಗಳನ್ನು ಫ್ಯಾಕ್ಟರಿಗಳು ತಯಾರಿಸಿ ನೀಡುತ್ತವೆ. ಆಯಾ ಪ್ರದೇಶಕ್ಕೆ ಸೂಕ್ತವಾದ ಮತ್ತು ಆರೋಗ್ಯಕ್ಕೆ ಹಾನಿಕರವಲ್ಲದ ಟೈಲ್ಸ್ಗಳನ್ನು ನಾವೇ ಸೂಚಿಸಿ ತಯಾರಿಸಿ ನಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಮಾಲಕರಾದ ರಿಯಾಝ್.

ಆದುದರಿಂದಲೇ ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಎಲ್ಲಾ ತರಹದ ಗ್ರಾಹಕರಿಗೂ ಅತ್ಯಂತ ಮಿತ ದರದಲ್ಲಿ ಟೈಲ್ಸ್ಗಳನ್ನು ಮಾರಾಟ ಮಾಡುತ್ತೇವೆ. ಗ್ರಾಹಕರ ಸಂತೃಪ್ತಿಯೇ ನಮಗೆ ಮುಖ್ಯ ಎನತ್ತಾರೆ ಅವರು.
ಒಟ್ಟಿನಲ್ಲಿ ಸುಳ್ಯದ ಜನತೆಯ ಕನಸಿನ ಮನೆ, ಕಟ್ಟಡಗಳ ನಿರ್ಮಾದ ಸಾಕಾರ ಇನ್ನು ಸ್ಟಾರ್ ಟೈಲ್ಸ್ ಮೂಲಕ ಸಾಕಾರವಾಗಲಿದೆ.

















