ಸುಳ್ಯ:ಅರಂತೋಡು ಗ್ರಾಮದ ಅಡ್ತಲೆ ಬೆದ್ರುಪಣೆ ಎಂಬಲ್ಲಿ ಮರಿ ಆನೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಬೆದ್ರುಪಣೆಯ ಸ್ಥಳೀಯರ ತೋಟದ ಮಧ್ಯೆ ಅಂದಾಜು ಒಂದು ವರ್ಷ ಪ್ರಾಯದ ಮರಿ ಆನೆ ಮೃತಪಟ್ಟ ನೆಲೆಯಲ್ಲಿ ಕಂಡು ಬಂದಿದೆ. ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದ

ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆ ಮರಿಯ ದೇಹದಲ್ಲಿ ಗಾಯದ ಗುರುತುಗಳಿದ್ದು ದೊಡ್ಡ ಆನೆಗಳ ಹೊಡೆತದಿಂದ ಗಾಯಗಳಾಗಿ ಸಾವನ್ನಪದಪಿರುವ ಸಾಧ್ಯತೆ ಇದೆ.ವೈದ್ಯರುಗಳು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಈ ಭಾಗದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ್ದು ಕೃಷಿ ನಾಶ ಮಾಡಿದೆ.














