ಸುಳ್ಯ: ಆನ್ಲೈನ್ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ವ್ಯಾಪಾರಿಗಳ ಸಂಘ ನೀಡಿರುವ ಕರೆಯ ಮೇರೆಗೆ ಔಷಧ ಮಳಿಗೆಗಳು ಬುಧವಾರ ಬಂದ್ ಆಗಿದೆ.ಮಂಗಳವಾರ ರಾತ್ರಿ 12ರಿಂದ ಬುಧವಾರ ರಾತ್ರಿ 12 ರವರೆಗೆ
ಔಷಧ ಅಂಗಡಿಗಳನ್ನು ಬಂದ್ ಮಾಡುವಂತೆ ಅಖಿಲ ಭಾರತ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಷನ್ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದವು. ಸುಳ್ಯ ತಾಲೂಕಿನಲ್ಲಿ ಪ್ರಮುಖ ಮೆಡಿಕಲ್ ಶಾಫ್ಗಳು ಬಂದ್ ಆಗಿದ್ದವು. ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ತೆರೆದಿತ್ತು.













