ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆದ
ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಕೊನೆಯ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನೀಂಗ್ಸ್ನಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 425 ರನ್
ಭಾರತ ಪರ ನಾಯಕ ಶುಭಮನ್ ಗಿಲ್(103), ರವೀಂದ್ರ ಜಡೇಜಾ(107) ಮತ್ತು ವಾಷಿಂಗ್ಟನ್ ಸುಂದರ್(101) ಶತಕ ಬಾರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ
311 ರನ್ಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿಯೇ ಎರಡು ವಿಕೆಟ್ಗಳನ್ನು ಪಡೆದುಕೊಂಡಿತು. ಇಲ್ಲಿಂದ, ಟೀಂ ಇಂಡಿಯಾದ ಸೋಲು ಖಚಿತವೆಂದು ತೋರುತ್ತಿತ್ತು. ಆದರೆ ಪಂದ್ಯದ ಕೊನೆಯ 5 ಸೆಷನ್ಗಳಲ್ಲಿ, ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಶತಕ ಅವರ ಶತಕದ ಇನ್ನಿಂಗ್ಸ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರ 90 ರನ್ಗಳ ಕೊಡುಗೆ ತಂಡವನ್ನು ಸೋಲಿನ ದವಡೆಯಿಂದ ಹೊರತಂದಿತು.
ರಾಹುಲ್ ಮತ್ತು ಗಿಲ್ ವಿಕೆಟ್ ಪತನಗೊಂಡಾಗ ಭಾರತ ಇನಿಂಗ್ಸ್ ಸೋಲು ಕಾಣಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಸ್ಪಿನ್ ಆಲ್ರೌಂಡರ್ಗಳಾದ ಜಡೇಜಾ ಮತ್ತು ಸುಂದರ್ ಸೇರಿಕೊಂಡು ತಂಡದ ರಕ್ಷಣೆಗೆ ಟೊಂಕ ಕಟ್ಟಿದರು. ಆಂಗ್ಲರ ಎಲ್ಲ ಬೌಲಿಂಗ್ ಅಸ್ತ್ರವನ್ನು ವಿಫಲಗೊಳಿಸಿ ಅಜೇಯ ಶತಕ ಬಾರಿಸಿ ಐತಿಹಾಸಿಕ ಡ್ರಾ ಸಾಧಿಸಿ ಮೆರೆದಾಡಿದರು.ವಾಷಿಂಗ್ಟನ್ ಸುಂದರ್ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಬಾರಿಸಿದ ಸಾಧನೆ ಮಾಡಿರು.
ಭಾರತ ಮೊದಲ ಇನ್ನೀಂಗ್ಸ್ನಲ್ಲಿ 358 ರನ್ ಗಳಿಸಿದರೆ, ಇಂಗ್ಲೆಂಡ್ 669 ರನ್ ಗಳಿಸಿತ್ತು.














