ಸುಳ್ಯ:ಸುಳ್ಯದ ಅತೀ ದೊಡ್ಡ ಡಿಜಿಟಲ್ ಮೊಬೈಲ್ ಶೋರೂಮ್ ಮೊಬೈಲ್ ಗ್ಯಾರೇಜ್ನಲ್ಲಿ Apple ಎಕ್ಸ್ಫೀರಿಯನ್ಸ್ ಕೌಂಟರ್ ಜೂ.17ರಂದು
ಉದ್ಘಾಟನೆಗೊಂಡಿತು.ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ ಕೌಂಟರ್ ಉದ್ಘಾಟಿಸಿ ಶುಭ ಹಾರೈಸಿದರು. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಬಜಾಜ್ ಫೈನಾನ್ಸ್ನ ವ್ಯವಸ್ಥಾಪಕ ಚಂದ್ರಹಾಸ್,ಸುಳ್ಯ ತಾಲೂಕು ರಿಟೇಲ್ ಮೊಬೈಲ್ ಅಸೋಸಿಯೇಷನ್ನ
ಅಧ್ಯಕ್ಷ ಅಬ್ದುಲ್ ರಹಿಮಾನ್,ಸೀಮಾ ಡಿಜಿಟಲ್ ಆರ್ಟ್ಸ್ ಮತ್ತು ಪ್ರಿಂಟರ್ಸ್ನ ಮಾಲಕ ಜಯಂತ ರೈ, ಲಾರೆನ್ಸ್ ಮೋಟಾರ್ ಡ್ರೈವಿಂಗ್ ಸ್ಕೂಲ್ನ ಮಾಲಕಿ ನ್ಯಾಯವಾದಿ ಸುನಿತಾ ಡಿಸೋಜ ಅತಿಥಿಗಳಾಗಿದ್ದರು. ಮೊಬೈಲ್ ಗ್ಯಾರೇಜ್ನ ಮಾಲಕ ಹಸೈನಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು. ಮೊಬೈಲ್ ಗ್ಯಾರೇಜ್ನ ರಫೀಕ್, ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯದ ಮೊಬೈಲ್ ಶೋರೂಮ್ ಒಂದರಲ್ಲಿ ಪ್ರಥಮ ಬಾರಿಗೆ Apple ಕಂಪೆನಿಯವರು ಎಕ್ಸ್ಫೀರಿಯನ್ಸ್ ಕೌಂಟರ್ ಸ್ಥಾಪಿಸುತ್ತಿದ್ದು ಗ್ರಾಹಕರಿಗೆ ಆಫಲ್ ಮೊಬೈಲ್ ಕುರಿತ ಸಂಪೂರ್ಣ ಮಾಹಿತಿ, ಸೇವೆ ಕೌಂಟರ್ ಮೂಲಕ ಲಭ್ಯವಾಗಲಿದೆ. ಸುಳ್ಯದಲ್ಲಿ ಅತೀ ಹೆಚ್ಚು ಆಫಲ್ ಮೊಬೈಲ್ ಮಾರಾಟ ನಡೆಸುವ ಮತ್ತು ಮತ್ತು ಸೇವೆ ನೀಡುತ್ತಿರುವ ಮೊಬೈಲ್ ಗ್ಯಾರೇಜ್ನಲ್ಲಿ ಕಂಪೆನಿಯೇ ಅತ್ಯಾಧುನಿಕ ಕೌಂಟರ್ ಸ್ಥಾಪಿಸಿದೆ.








