ಸುಳ್ಯ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ದ.ಕ ಈಸ್ಟ್ ಜಿಲ್ಲೆಯ ವತಿಯಿಂದ ಮಿಲಾದ್ ಸ್ನೇಹ ಕೂಟ ಸುಳ್ಯದ ಅನ್ಸಾರಿಯಾ ಗಲ್ಫ್ ಅಡಿಟೋರಿಯಂನಲ್ಲಿ ನಡೆಯಿತು. ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮಗುರು ಫಾ. ಓಲ್ವಿನ್ ಎಡ್ವರ್ಡ್ ಡಿಕುನ್ಹಾ ಉದ್ಘಾಟಿಸಿದರು. ಎಸ್ವೈಎಸ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ
ಸಂದೇಶ ನೀಡಿ ‘ಧರ್ಮಗಳು ಜನರನ್ನು, ಜನರ ಹೃದಯಗಳನ್ನು ಪರಸ್ಪರ
ಬೆಸೆಯುತ್ತದೆ.ಎಲ್ಲಾ ಮನುಷ್ಯರು ಒಂದೇ ನಾವೆಲ್ಲರೂ ಅನ್ಯೂನ್ಯತೆಯಿಂದ ಬದುಕಬೇಕು ಎಂಬ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು.ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ‘ನಾವು ಕಾಲದ ಜೊತೆ ಹೆಜ್ಜೆ ಹಾಕಬೇಕಾಗಿದೆ. ಮೌಲ್ಯಯುತ ಆಚರಣೆಗಳ ಮೂಲಕ ಅರ್ಥಪೂರ್ಣ ಮತ್ತು ಸೌಹಾರ್ದತೆ ಮತ್ತು ಸಂತಸದ
ಬದುಕು ನಡೆಸಬೇಕು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪ್ರಮುಖರಾದ

ಡಾ.ಉಮ್ಮರ್ ಫಾರೂಖ್, ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಖಜಾಂಜಿ ಶಾಫಿ ಸಖಾಫಿ ಕೊಕ್ಕಡ,ಎಪಿಎಂಸಿ ಕಾರ್ಯದರ್ಶಿ ರವೀಂದ್ರ,ಪ್ರಮುಖರಾದ ಎಂ.ಬಿ.ಸದಾಶಿವ,ಅಶೋಕ್ ಎಡಮಲೆ, ಇಕ್ಬಾಲ್ ಎಲಿಮಲೆ, ಎಸ್.ಸಂಶುದ್ದೀನ್, ಮಹಮ್ಮದ್ ಕುಂಞಿ ಗೂನಡ್ಕ, ಆದಂ ಹಾಜಿ ಕಮ್ಮಾಡಿ,ಕೆ.ಬಿ.ಇಬ್ರಾಹಿಂ, ಶ್ರೀಹರಿ ಕುಕ್ಕುಡೇಲು, ಕೆ.ಎಸ್.ಉಮ್ಮರ್, ಮೂಸಾ ಕುಂಞಿ ಪೈಂಬೆಚ್ಚಾಲ್, ಶಾಫಿ ಕುತ್ತಮೊಟ್ಟೆ ರಾಜು ಪಂಡಿತ್,ಪಿ.ಎಸ್.ಗಂಗಾಧರ, ಅಬ್ದುಲ್ ಕಲಾಂ, ಪಿ.ಎ.ಮಹಮ್ಮದ್, ಪ್ರವೀಣ್ ಮುಂಡೋಡಿ, ಅಬೂಬಕ್ಕರ್ ಅಡ್ಕಾರ್, ಅಬ್ದುಲ್ ಬಶೀರ್ ಸ್ವಪ್ನಾ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಬ್ದುಲ್ ಮಜೀದ್.ಕೆ.ಬಿ,ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಲತೀಪ್ ಹರ್ಲಡ್ಕ, ಸಾಧಿಕ್ ಮಾಸ್ಟರ್, ಇಲ್ಯಾಸ್ ಮಾಸ್ಟರ್, ಹಾಜಿ

ಮಹಮ್ಮದ್ ಕೆ.ಎಂ.ಎಸ್, ಹಮೀದ್ ಹಾಜಿ ಎಸ್.ಎಂ, ಎಸ್.ಪಿ.ಅಬೂಬಕ್ಕರ್, ಲತೀಫ್ ಸಖಾಫಿ ಗೂನಡ್ಕ,ಇಲ್ಯಾಸ್ ಕಾಶಿಪಟ್ಟಣ, ಫೈಝಲ್ ಕಟ್ಟೆಕ್ಕಾರ್, ಜಯಕರ ಮಡ್ತಿಲ, ಗುರುಪ್ರಸಾದ್, ತಿರುಮಲೇಶ್ವರ ಗೌಡ,ಕೆ.ಗೋಕುಲ್ದಾಸ್,ನಂದರಾಜ ಸಂಕೇಶ್, ಚೇತನ್ ಕಜೆಗದ್ದೆ, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ,ಧರ್ಮಪಾಲ ಕೊಯಿಂಗಾಜೆ, ಕೇಶವ ಮೊರಂಗಲ್ಲು, ಸುನಿಲ್ ಮಸ್ಕರೇಙಸ್, ರಶೀದ್ ಜಟ್ಟಿಪಳ್ಳ,ರಶೀದ್ ಗೂನಡ್ಕ, ನಾಸಿರ್ ಪೆರಾಜೆ, ಅಬೂಬಕ್ಕರ್ ಜಟ್ಟಿಪಳ್ಳ, ಸಿದ್ದಿಕ್ ಕೋಡಿಯೆಮ್ಮೆ ಸಿದ್ದಿಕ್ ಕಟ್ಟೆಕ್ಕಾರ್, ಹನೀಪ್ ಅಲ್ಪಾ, ಅಬೂಬಕ್ಕರ್ ಹಾಜಿ ಬಿಎಂಎ, ಅಬ್ದುಲ್ ಖಾದರ್ ಹಾಜಿ ಕಲ್ಲಪಳ್ಳಿ, ಇಬ್ರಾಹಿಂ ಹಾಜಿ ಕುಂಭಕ್ಕೋಡು ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಿಕ್ ಗೂನಡ್ಕ, ನೌಷಾದ್ ಕೆರೆಮೂಲೆ, ಕಬೀರ್ ಜಟ್ಟಿಪಳ್ಳ ಮತ್ತಿತರರು ಸಹಕರಿಸಿದರು.ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.









