ಕೊಚ್ಚಿ:ಅಧಿಕ ಮೊತ್ತದ ಗಳಿಕೆಯ ಸಿನಿಮಾ ಎಂದು ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಮಮಿತಾ ಬೈಜು, ನಿವಿನ್ ಪೌಲಿ ನಟನೆಯ ‘ಬೆತ್ಲಹೆಮ್ ಕುಟುಂಬ ಯುನಿಟ್’ ಒಟಿಟಿ ರಿಲೀಸ್ಗೆ ಸಿದ್ಧತೆ ನಡೆದಿದೆ.ಅ.2 ರಿಂದ ಜಿಯೋ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಲಿದೆ. ಮಲಯಾಳಂ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ
ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.ನಿವಿನ್ ಪೌಲಿ, ಮಮಿತಾ ಬೈಜು ಪ್ರಮುಖ ಪಾತ್ರದ ಅಭಿನಯಿಸಿರುವ ಈ ಚಿತ್ರ ಮಾಲಿವುಡ್ ಇತಿಹಾಸದ ದೊಡ್ಡ ಗಳಿಕೆ ಕಂಡಿದೆ.
ಗಿರೀಶ್ ಎಡಿ ನಿರ್ದೇಶನದ ಈ ರೋಮ್ಯಾಂಟಿಕ್ ಕಾಮಿಡಿ ಚಿತ್ರ 326 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದೆ. ಕೇರಳಂ ರಾಜ್ಯದಲ್ಲೇ ಮೊದಲ ಬಾರಿಗೆ 150 ಕೋಟಿಗೂ ಅಧಿಕ ರೂ.ಸಂಗ್ರಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ಮಲಯಾಳಂ ಚಿತ್ರರಂಗದಲ್ಲಿ ಅತಿ ವೇಗವಾಗಿ 300 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಥಿಯೇಟರ್ನಲ್ಲಿ ಮೋಡಿ ಮಾಡಿ
ಯಶಸ್ವಿ ಪ್ರದರ್ಶನ ಕಂಡ ಬಳಿಕ ಚಿತ್ರ ಒಟಿಟಿಗೆ ಬರಲು ಸಜ್ಜಾಗಿದೆ.ಓಣಂ ಹಬ್ಬದ ಸಂದರ್ಭ ಆಗಸ್ಟ್ 21ರಂದು ತೆರೆಕಂಡಿದ್ದ ಈ ಸಿನಿಮಾದ ಗೆಲುವಿನಲ್ಲಿ ಪ್ರೇಕ್ಷಕರ ಅನಿಸಿಕೆ, ಅಭಿಪ್ರಾಯಗಳೇ ಪ್ರಮುಖ ಪಾತ್ರ ವಹಿಸಿತ್ತು. ಭಾರತದಲ್ಲಷ್ಟೇ ಅಲ್ಲದೆ ಹೊರ ದೇಶಗಳಲ್ಲೂ ನಿವಿನ್ ಪೌಲಿ ಸಿನಿಮಾ ಮೋಡಿ ಮಾಡಿದೆ. ಯುಕೆ, ಅಮೆರಿಕದಲ್ಲೂ ಈ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ.ಮಲಯಾಳದಲ್ಲಷ್ಟೇ ತೆರೆಕಂಡ ‘ಬೆತ್ಲೆಹೆಮ್ ಕುಟುಂಬ ಯುನಿಟ್’ ಚಿತ್ರವು ಬಳಿಕ ತೆಲುಗು, ತಮಿಳಿನಲ್ಲಿ ಡಬ್ ಆಗಿ ತೆರೆಕಂಡಿತ್ತು.ಈ ಸಿನಿಮಾದಲ್ಲಿ ನಿವಿನ್ ಪೌಲಿ ಮತ್ತು ಮಮಿತಾ ಬೈಜು ಜೋಡಿಗೆ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.









