ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅದಾನಿ ಸಿಮೆಂಟ್ (ಎಸಿಸಿ) ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ‘ನೀವ್ ಅಭಿಯಾನ್’ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸಿವಿಲ್ ಕಾಂಟ್ರಾಕ್ಟರ್ಗಳು ಮತ್ತು ಸಿವಿಲ್ ಇಂಜಿನಿಯರಿಂಗ್
ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಏರಿಯಾ ಆಫೀಸ್ನ ಟೆಕ್ನಿಕಲ್ ಸರ್ವಿಸಸ್ ಮೆನೇಜರ್ ಇಂಜಿನಿಯರ್ ರಜತ್ ವಿ.ಜಿ. ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಎ ಅವರು ಉಪನ್ಯಾಸ ನೀಡಿದರು.ಎಸಿಸಿ ಸಿಮೆಂಟ್ನ ವಿತರಕರಾದ ಲಕ್ಷೀ ಸಿಮೆಂಟ್ನ ಮಾಲಕರಾದ ಉದ್ಯಮಿ
ಧನಂಜಯ ಅಡ್ಪಂಗಾಯ ಅನಿಸಿಕೆಗಳನ್ನು ಹಂಚಿಕೊಂಡರು.

ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ಉಜ್ವಲ್ ಯು.ಜೆ. ಮುಖ್ಯ ಅತಿಥಿಯಾಗಿದ್ದರು. ಎಸಿಸಿ ಸಿಮೆಂಟ್ನ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಮತ್ತು ಕಾಂಟ್ರಾಕ್ಟರ್ಗಳಿಗೆ ಸಹಕಾರಿಯಾಗುವಂತೆ ತರಬೇತಿ ಕೇಂದ್ರವನ್ನು ತೆರೆಯುವ ಭರವಸೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಮಾತನಾಡಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಕೃಷ್ಣರಾಜ್ ಎಂ.ವಿ. ಸ್ವಾಗತಿಸಿದರು.
ಪ್ರೊ. ಅರುಣ್ ಕುಮಾರ್ ಹೆಚ್. ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾದ ಹವ್ಯ ಮತ್ತು ಜೋವಿಟ ಕಾರ್ಯಕ್ರಮ ನಿರೂಪಿಸಿದರು. ಇದೇ ಕಾರ್ಯಕ್ರಮದಲ್ಲಿ ಶ್ರೀ ಧನಂಜಯ ಅಡ್ಪಂಗಾಯ ಮತ್ತು ಇಂಜಿನಿಯರ್ ರಜತ್ ವಿ.ಜಿ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸಿಸಿ ಸಿಮೆಂಟ್ನ ಸಿಬ್ಬಂಧಿಗಳಾದ ದೀಪ್ತೇಶ್, ಅಶ್ವಿನ್, ರಕ್ಷಿತ್, ಸಿವಿಲ್ ಕಾಂಟ್ರಾಕ್ಟರ್ಗಳು, ಸಹ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು, ಆಡಳಿತಾಧಿಕಾರಿಗಳು, ಸಿಬ್ಬಂಧಿಗಳು, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪ್ರಾಧ್ಯಾಪಕವೃಂದ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.