ಕಛ್: ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಭುಜ್ ನಲ್ಲಿ ಭೂಕಂಪ ಸಂತ್ರಸ್ತರ ನೆನಪಲ್ಲಿ ನಿರ್ಮಾಣಗೊಂಡಿರುವ ಸ್ಮೃತಿ ವನಕ್ಕೆ ಇಂದು ರಾಷ್ಟ್ರ ಪತಿ ದ್ರೌಪತಿ ಮುರ್ಮು ಭೇಟಿ ನೀಡಿದರು. ಗುಜರಾತ್ ಪ್ರವಾಸದ ವೇಳೆವಇಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ, ಸುಳ್ಯದವರಾದ ಡಾ. ಆರ್. ಕೆ. ನಾಯರ್ ನೇತೃತ್ವದಲ್ಲಿ ಅತಿ ದೊಡ್ಡ ಮಿಯಾವಾಕಿ ಅರಣ್ಯ ಬೆಳೆಸಿದ್ದು ಇದನ್ನು ವೀಕ್ಷಿಸಿದ ರಾಷ್ರ್ಟಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲಿ
ಅವರು ಗಿಡಗಳನ್ನೂ ನೆಟ್ಟರು. ಡಾ.ಆರ್.ಕೆ.ನಾಯರ್ ಅವರು ಕಚ್ನ ಮಣ್ಣಿನಲ್ಲಿ ತಯಾರಿಸಿದ ಮಣ್ಣಿನ ಮಡಿಕೆಯಲ್ಲಿ ಬೆಳೆಸಿದ ಗಿಡವನ್ನು ನೆಡಲಾಯಿತು. ಸಂದರ್ಭದಲ್ಲಿ ಮಣ್ಣು ಹಾಕಲು ಮಣ್ಣಿನ ಪಾತ್ರ ಮತ್ತು ನೀರು ಹಾಕಲು ಮಣ್ಣಿನ ಜಗ್ಗನ್ನೇ ಬಳಸಿಮಣ್ಣಿನ ಸಂರಕ್ಷಣೆಯ ಸಂದೇಶ ಸಾರಿದ ಈ ಯೋಜನೆಗೆ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಮೃತಿವನದಲ್ಲಿ 5.25 ಲಕ್ಷ ಗಿಡಗಳನ್ನು ನೆಡಲಾಗಿದೆ. ಮುಂದಿನ ವಾರ 50 ಸಾವಿರ ಗಿಡ ನೆಡುವ ಯೋಜನೆ ಇದೆ. ಒಟ್ಟು 10 ಲಕ್ಷ ಗಿಡಗಳನ್ನು ನೆಡುವ ಯೋಜನೆ ಇದೆ ಎಂದು ಡಾ.ಆರ್.ಕೆ.ನಾಯರ್ ತಿಳಿಸಿದ್ದಾರೆ.ಇದೊಂದು ಮರೆಯಲಾಗದ, ಹೆಮ್ಮೆಯ ಕ್ಷಣ ಎಂದು ಡಾ. ಆರ್.ಕೆ. ನಾಯರ್ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಮೃತಿ ವನವನ್ನು ಲೋಕಾರ್ಪಣೆಗೊಳಿಸಿದ್ದರು.
