ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರ 70ನೇ ಹುಟ್ಟು ಹಬ್ಬದ ಆಚರಣೆ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ಅ.29 ರಂದು ನಡೆಯಿತು. ಕಾರ್ಯಕ್ರಮವನ್ನು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು.ಕೋಲಾರ ಎಂ.ಎಸ್.ಜಿ.ಎಂ. ಆಸ್ಪತ್ರೆಯ
ಆರೋಗ್ಯ ನಿರ್ದೇಶಕ ದೊಡ್ಡಭದ್ರೇಗೌಡ, ಮೈಸೂರು ರೈಲ್ವೆ ಅಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ.ಮಂಜುನಾಥ್ ಡಿ.ಟಿ., ಐ.ಎಂ.ಎ. ಕರ್ನಾಟಕ ಮಾಜಿ ಅಧ್ಯಕ್ಷ ಕೃಷ್ಣೇ ಗೌಡ, ಕುಶಾಲನಗರ ಕಾವೇರಿ ಸ್ಕಿನ್ ಕೇರ್ ಕ್ಲಿನಿಕ್ನ ಡಾ.ಸಿದ್ದುಪ್ರಕಾಶ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಅರಂತೋಡು ನೆಹರು ಮೆಮೊರಿಯಲ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ ಅಭಿನಂದನಾ ಭಾಷಣ ಮಾಡಿದರು.
ಮೆಡಿಕಲ್ ಕಾಲೇಜ್ ಡೀನ್ ಡಾ.ನೀಲಾಂಬಿಕೆ ನಟರಾಜನ್, ಡಾ.ಶೀಲಾ ಜಿ.ನಾಯಕ್, ಅಕಾಡೆಮಿಯ ಉಪಾಧ್ಯಕ್ಷೆ ಶೋಭಾ ಚಿದಾನಂದ, ಡಾ.ಐಶ್ವರ್ಯ ಗೌತಮ್, ಡಾ.ಗೌತಮ್, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಎನ್.ಎಂ.ಸಿ. ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್, ಕೆ.ವಿ.ಜಿ. ಆಯುರ್ವೇದ ಕಾಲೇಜ್ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ., ಕೆ.ವಿ.ಜಿ. ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್ನ ಶೈಕ್ಷಣಿಕ ಸಂಯೋಜಕಿ ಡಾ.ನವ್ಯ, ಕೆ.ವಿ.ಜಿ. ನರ್ಸಿಂಗ್ ಇನ್ಸ್ಟಿಟ್ಯೂಟ್ ಪ್ರಾಂಶುಪಾಲ ಡಾ.ಪ್ರಮೋದ್ ಕೆ.ಜೆ., ನರ್ಸಿಂಗ್ ಇನ್ ಸ್ಟಿಟ್ಯೂಟ್ನ ಚಂದ್ರಾವತಿ, ಕೆ.ವಿ.ಜಿ. ಪ್ಯಾರಾ ಮೆಡಿಕಲ್ ಕೋರ್ಸ್ಗಳ ಶೈಕ್ಷಣಿಕ ಸಂಯೋಜಕಿ ಡಾ.ನಮ್ರತಾ, ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಟೀನಾ ಎಚ್.ಎಸ್., ಕೆ.ವಿ.ಜಿ. ಫೀಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಮನೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಭದಲ್ಲಿ ಡಾ.ಕೆ.ವಿ. ಚಿದಾನಂದರನ್ನು ಸನ್ಮಾನಿಸಲಾಯಿತು. ಡಾ.ಚಿದಾನಂದ ಹಾಗೂ ಪತ್ನಿ ಶ್ರೀಮತಿ ಶೋಭಾ ಚಿದಾನಂದ ಅವರನ್ನು ಡಾ.ಚಂದ್ರಶೇಖರ ಶೆಟ್ಟಿ ಸನ್ಮಾನಿಸಿದರು. ಡಾ.ನೀಲಾಂಬಿಕೆ ನಟರಾಜನ್ ಸ್ವಾಗತಿಸಿ, ಡಾ.ಲೀಲಾಧರ್ ಡಿ.ವಿ. ವಂದಿಸಿದರು. ಮಿಥಾಲಿ ಪಿ.ರೈ ಹಾಗೂ ಕು.ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.















