ಕೂರ್ನಡ್ಕ: ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂರ್ನಡ್ಕ – ಕಾಪುಮಲೆ ರಸ್ತೆಗೆ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 10 ಲಕ್ಷ ಅನುದಾನ ಬಿಡುಗಡೆ ಗೊಂಡಿದ್ದು, ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಪರಿಷತ್
ಮಾಜಿ ಸದಸ್ಯ ದೇವಪ್ಪ ನಾಯ್ಕ ಹೊನ್ನಡಿ ಗುದ್ದಲಿ ಪೂಜೆ ನೆರವೇರಿಸಿದರು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತ್ಯಕುಮಾರ್ ಆಡಿಂಜ ಮಾತನಾಡಿದರು. ಸ್ಥಳೀಯರಾದ ಪೊರುಷೋತ್ತಮ ದೋಣಿಮೂಲೆ, ರಾಮಚಂದ್ರ ಪಾವಳಿಕಜೆ, ತೀರ್ಥರಾಮ ಬಡ್ಡಡ್ಕ, ಮಾಧವ ಪಾವಳಿಕಜೆ,ಸುಕುಡಪ್ಪ ನಾಯ್ಕ, ತಿಮ್ಮಪ್ಪ ಗೌಡ ನೆಡ್ಚಿಲು, ತೀರ್ಥರಾಮ, ರಮೇಶ್ ಪಾವಳಿಕಜೆ, ಸರೋಜಿನಿ ಪಾವಳಿಕಜೆ, ಸುಲೋಚನ, ಉಪಸ್ಥಿತರಿದ್ದರು. ಉದಯಕಿರಣ ಕಾಪುಮಲೆ ಮತ್ತಿತರರು ಉಪಸ್ಥಿತರಿದ್ದರು.






