ಸುಳ್ಯ: ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಛೇರಿ ಶ್ರೀ ಎ.ಎಸ್ ವಿಜಯಕುಮಾರ್ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ವಿಕ್ರಂ ಎ.ವಿ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಓದಿ ದಾಖಲಿಸಲಾಯಿತು. 2025-26 ನೇ ಸಾಲಿನ
ವಾರ್ಷಿಕ ವರದಿಯಂತೆ 3.40 ಕೋಟಿ ಪಾಲು ಬಂಡವಾಳ ಹೊಂದಿದ್ದು ವಾರ್ಷಿಕವಾಗಿ 61,31,239.42 ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ.9 ರಷ್ಟು ಡಿವಿಡೆಂಟ್ ನೀಡುವುದಾಗಿ ಘೋಷಿಸಲಾಯಿತು. ಅಲ್ಲದೇ ಸಭೆಯಲ್ಲಿ ಅಡಿಕೆಗೆ ಬಾಧಿಸುತ್ತಿರುವ ರೋಗಗಳ ಹಿನ್ನೆಲೆಯಲ್ಲಿ ಪರ್ಯಾಯ ಕೃಷಿ ನಡೆಸಲು ರೈತರಿಗೆ ಸಬ್ಸಿಡಿ ದರದಲ್ಲಿ ಕಾಳು ಮೆಣಸಿನ ಗಿಡ ಹಾಗು ಕಾಫಿ ಗಿಡವನ್ನು ನೀಡುವ ಮೂಲಕ ಅಡಿಕೆ ಜೊತೆಗೆ ಇತರೆ ಬೆಳೆಗಳನ್ನು ಬೆಳೆಸಲು ಸಂಘವು ಕೃಷಿಕರಿಗೆ ಪ್ರೋತ್ಸಾಹ ನೀಡಲಿದೆ ಎಂದು ಅಧ್ಯಕ್ಷರಾದ ವಿಕ್ರಂ ಎ.ವಿ.ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ, ನಿರ್ದೇಶಕರಾದ ರಾಮಚಂದ್ರ ಎನ್ ಎ , ಪ್ರಬೋದ್ ಶೆಟ್ಟಿ ಎಂ , ವೆಂಕಟ್ರಮಣ ಎಂ , ಶಿವರಾಮ ಕೆ , ವಾಸುದೇವ ನಾಯಕ್ ಪಿ , ನವ್ಯ ಎ.ಸಿ , ಹರಿಣಾಕ್ಷಿ ಬಿ , ಕೇಶವ ಸಿ.ಎ,ಚಂದ್ರಶೇಖರ ಡಿ.ಕೆ,ಹೇಮಂತ್ ಕೆ ಆರ್ , ಬಾಲಗೋಪಾಲ ಎಂ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
























