ತೊಡಿಕಾನ:ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರ ಎರಡು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ತೊಡಿಕಾನ ಗ್ರಾಮದ ದೊಡ್ಡಕುಮೇರಿ ಪ.ಜಾತಿ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೋಳ್ಕೂರು ನೆರವೇರಿಸಿದರು.ಈ ಸಂಧರ್ಭದಲ್ಲಿ
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿ ಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮುಖಂಡರಾದ ಕೇಶವ ಕೊಳಲು ಮೂಲೆ, ತಿಮ್ಮಯ್ಯ ಮೈತ್ತಡ್ಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಪೂಜಾರಿ ಪಂಜಿಕೋಡಿ, ಕೇಪು ದೊಡ್ಡಕುಮೇರಿ,ಶಂಕರ ದೊಡ್ಡಕುಮೇರಿ,ಗುರುವಪ್ಪ ದೊಡ್ಡಕುಮೇರಿ,ಶಶಿಧರ ದೊಡ್ಡಕುಮೇರಿ, ಜಯರಾಮ ದೊಡ್ಡಕುಮೇರಿ,ಬಾಬು ದೊಡ್ಡಕುಮೇರಿ, ಮಾಧವ ದೊಡ್ಡಕುಮೇರಿ ಮತ್ತಿತರರು ಉಪಸ್ಥಿತರಿದ್ದರು.









