ಸುಳ್ಯ:ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಪ್ರಮುಖರ ಸಭೆ ನಡೆಯಿತು. ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ನಿರಂಜನ್ ಶೆಟ್ಟಿ ಮತ್ತಿತರ ಅಧಿಕಾರಿಗಳಲ್ಲಿ ಭಾಗವಹಿಸಿದ್ದರು. ಆನೆ ಹಾವಳಿ
ವಿಸ್ತರಣೆ ಯಾಗುತ್ತಿರುವ ಕುರಿತು ಚರ್ಚಿಸಲಾಯಿತು. ಡಿಎಫ್ಒ ಅವರಿಗೆ ಕರೆ ಮಾಡಿ ಶಾಸಕರು ಮಾತನಾಡಿ ಆನೆ ಹಾವಳಿ ತಡೆಗೆ ಕ್ರಮಕ್ಕೆ ಆಗ್ರಹಿಸಿದರು. ಸುಳ್ಯಕ್ಕೆ ಭೇಟಿ ನೀಡಿ ಕೃಷಿಕರ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿರುತ್ತಾರೆ. ಸಭೆ ಹಾಗೂ ಹಾನಿಗೊಳಗದ ಪ್ರದೇಶ ಭೇಟಿ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಆನೆ ಕಾರ್ಯಪಡೆ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಕೇಶವ ಅಡ್ತಲೆ, ಜಗದೀಶ್ ಆರಂಬೂರು, ವೆಂಕಟ್ರಮಣ ಪೆತ್ತಾಜೆ, ಸುರೇಶ ಕಮಿಲ, ಅಶೋಕ್ ಪೀಚೆ, ಬುದ್ಧ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
























