ಸುಳ್ಯ:ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಆಟಿಲಿ ಒಂದು ದಿನ ಕಾರ್ಯಕ್ರಮ ಅರಂಬೂರು ಶ್ರೀ ಮೂಕಾಂಬಿಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಅಧ್ಯಾಪಕ ಕೆ. ಕೆ. ಶಿವಪ್ಪ ಮಾಂಬುಳಿ ಉದ್ಘಾಟಿಸಿದರು. ಅರಂಬೂರು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ.ಅನುರಾಧಾ ಕುರುಂಜಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಗೌಡ ಯುವ ಸೇವಾ ಸಂಘದ ಉಪಾಧ್ಯಕ್ಷ ಯತಿರಾಜ ಭೂತಕಲ್ಲು, ಆಲೆಟ್ಟಿ ಗ್ರಾಮ ಮಹಿಳಾ ಗೌಡ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಗೌಡ ಯುವ ಸೇವಾ ಸಂಘದ ನಿರ್ದೇಶಕ ಪುರುಷೋತ್ತಮ ಕೋಲ್ಚಾರು,ಗೌಡ ಘಟಕದ ಉಪಾಧ್ಯಕ್ಷ ಕೃಷ್ಣಪ್ಪ ಕೆದಂಬಾಡಿ,ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ನೆಡ್ಚಿಲ್, ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು ಉಪಸ್ಥಿತರಿದ್ದರು.
ಸ್ಪರ್ಧಾ ಕಾರ್ಯಕ್ರಮವನ್ನು ಪದ್ಮಯ್ಯ ಪಡ್ಪು ಉದ್ಘಾಟಿಸಿದರು. ಸುಮನ ನೆಡ್ಚಿಲ್ ಪ್ರಾರ್ಥಿಸಿ, ತೇಜಸ್ ಚಿದ್ಗಲ್ ಸ್ವಾಗತಿಸಿ, ವೇದಾವತಿ ನೆಡ್ಚಿಲ್ ವಂದಿಸಿದರು.ಗಂಗಾಧರ ನೆಡ್ಚಿಲ್ ವರದಿ ವಾಚಿಸಿ, ಅಶೋಕ ಪೀಚೆ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಹಗ್ಗ ಜಗ್ಗಾಟ ಮತ್ತು ಶೋಭಾನೆ ಸ್ಪರ್ಧೆ, ಆಟಿ ತಿಂಗಳ ವಿಶೇಷ ಖಾದ್ಯಗಳ ಆಹಾರ ಮೇಳ, ಚೆನ್ನೆಮಣೆ, ಕೇರಂ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುರುಷ ಘಟಕದ ಅಧ್ಯಕ್ಷ
ಮನೋಹರ ಅರಂಬೂರು ವಹಿಸಿದ್ದರು. ಆಲೆಟ್ಟಿ ಗ್ರಾಮ ಗೌಡ ಸಮಿತಿಯ
ಅಧ್ಯಕ್ಷ ಸತೀಶ್ ಕೊಯಿಂಗಾಜೆ. ಭಾಗಮಂಡಲ ಕೆವಿಜಿ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕುಡೆಕಲ್ಲು, ಎಸ್ಕೆಆರ್ಡಿಪಿ
ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ಗೌಡ ಯುವ ಸೇವಾ ಸಂಘದ ನಿರ್ದೇಶಕ ಜಗದೀಶ್ ಸರಳಿಕುಂಜ, ಮಹಿಳಾ ಘಟಕದ ಗೌರವ ಸಲಹೆಗಾರರಾದ ಉಷಾ ಚಂದ್ರಶೇಖರ ಪಡ್ಪು, ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ ಮೊದಲಾದವರು ಭಾಗವಹಿಸಿದ್ದರು. ಮಹಿಳಾ ಘಟಕದ ಸದಸ್ಯೆ ಕವಿತಾ ಕುಡೆಕಲ್ಲು ಸ್ವಾಗತಿಸಿ, ಉಷಾ ಪಾಲಡ್ಕ ಸನ್ಮಾನಿತರನ್ನು ಪರಿಚಯಿಸಿ, ತೇಜಸ್ ಚಿದ್ಗಲ್, ಚಂದ್ರಾವತಿ ಬದಿಕಾನ ಬಹುಮಾನಿತರ ಪಟ್ಟಿ ವಾಚಿಸಿ, ಅಶೋಕ ಪೀಚೆ ವಂದಿಸಿದರು. ಮಹಿಳಾ ಘಟಕದ ಉಪಾಧ್ಯಕ್ಷೆ ರಾಜೀವಿ ಪಾಲಡ್ಕ ನಿರೂಪಿಸಿದರು.












