ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ, ಶೌರ್ಯ ವಿಪತ್ತು ಘಟಕ ಸುಳ್ಯ ವಲಯದ ಸದಸ್ಯರು ನಿರ್ಮಿಸಿದ ನೂತನ ಮನೆಯನ್ನು ಆಲೆಟ್ಟಿ ಗ್ರಾಮದ ಸವಿತಾ ಅಂಜಿಕಾರು ಅವರಿಗೆ
ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ
ಅಧ್ಯಕ್ಷ ಎಂ. ವೆಂಕಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ಸದಸ್ಯರಾದ ಜಿನ್ನಪ್ಪ ಪೂಜಾರಿ,ಬೂಡು ರಾಧಾಕೃಷ್ಣ ರೈ,ಒಕ್ಕೂಟದ

ಅಧ್ಯಕ್ಷ ಬಾಲಚಂದ್ರ,ಚಂದ್ರಶೇಖರ ನೆಡ್ಚಿಲ್, ಭಜನಾ ಪರಿಷತ್ ಮಾಜಿ ಗೌರವಾಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ, ಶೌರ್ಯ ಮಾಸ್ಟರ್ ಜಯರಾಮ್ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಶೌರ್ಯ ಸದಸ್ಯರು ಭಾಗವಹಿಸಿದರು. ಸದಸ್ಯ ರದೀಶ,ಮನೆ ಪಡೆದ ಸವಿತಾ ಮಾತನಾಡಿದರು.ಸುರೇಶ್ ನಿರೂಪಿಸಿ ಮೇಲ್ವಿಚಾರಕ ದಿನೇಶ್ ಸ್ವಾಗತಿಸಿದರು.
ಮನೆಗೆ 2.97 ಲಕ್ಷ ಖರ್ಚು ತಗುಲಿದ್ದು ಸದಸ್ಯರು ಭರಿಸಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಶ್ರಮದಾನದ ಮೂಲಕ ವೆಲ್ಡಿಂಗ್, ಗಾರೆ, ಪೈಂಟಿಂಗ್,ವಿದ್ಯುತ್ ವಯರಿಂಗ್ ಕೆಲಸ ಸಂಪೂರ್ಣ ಕೆಲಸವನ್ನು ಶೌರ್ಯ ಸದಸ್ಯರೇ ಮಾಡಿದ್ದಾರೆ.






