ಮಂಡೆಕೋಲು: ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರಧ್ವಾಜರು ನಿರ್ಮಿಸಿದ ತೂಗುಸೇತುವೆ ಬಳಿಯಲ್ಲಿಯೇ ಸಾರ್ವಜನಿಕರು ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಮಂಡೆಕೋಲಿನ ಪೆರಜ ತೂಗುಸೇತುವೆಯು ಸುಮಾರು
ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಗಿರೀಶ್ ಭಾರಧ್ವಾಜರು ಈ ಸೇತುವೆಯನ್ನು ನಿರ್ಮಿಸಿದ್ದರು.ಈ ತೂಗುಸೇತುವೆ ಕಲ್ಲಡ್ಕ ಪೆರಾಜೆ ಅಕ್ಕಪ್ಪಾಡಿ ಭಾಗದ ನಾಗರಿಕರ ಬದುಕನ್ನೇ ಬದಲಿಸಿದ ಸೇತುವೆಯಾಗಿದ್ದು, ಆ ಕಾರಣಕ್ಕಾಗಿಯೇ ತೂಗುಸೇತುವೆ ಸಂರಕ್ಷಣಾ ಸಮಿತಿ ಹಾಗೂ
ಊರವರು ಸೇತುವೇ ಬಳಿಯೇ ಭಾರಧ್ವಾಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉದಯಕುಮಾರ್ ಆಚಾರ್, ಸುರೇಶ್ ಕಣೆಮರಡ್ಕ, ಕೃಷ್ಣಪ್ರಸಾದ್ ಭಟ್, ಶಂಕರ ಪೆರಾಜೆ ನುಡಿನಮನ ಸಲ್ಲಿಸಿದರು.ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ ದೀಪ ಪ್ರಜ್ವಲನಗೊಳಿಸಿರು. ಕಾರ್ಯಕ್ರಮದಲ್ಲಿ ತೂಗುಸೇತುವೆ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿದ್ದರು. ಅನಿಲ್ ಅಕ್ಕಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.








