ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಎಡಮಂಗಲ- ಪುಳಿಕುಕುಕ್ಕು ರಸ್ತೆಗೆ 4ಕೋಟಿ ರೂ, ಮರ್ಕಂಜ- ಎಲಿಮಲೆ ರಸ್ತೆಗೆ 5ಕೋಟಿ ರೂ, ಐವರ್ನಾಡು- ದರ್ಖಾಸು ರಸ್ತೆಗೆ 3ಕೋಟಿ ಸೇರಿ ಒಟ್ಟು 12ಕೋಟಿ ರೂ ಅಭಿವೃದ್ಧಿ ಅನುದಾನ ಬಿಡುಗಡೆಗೊಂಡಿದ್ದು ಡಿಪಿಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆಗೆ
ಶಾಸಕರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕ ಆಂಗಿಕಾರಗೊಂಡು ಇಲಾಖೆಯಿಂದ ರಸ್ತೆಗಳ ಸಮಗ್ರ ಯೋಜನಾ ವರದಿ(DPR) ಸಲ್ಲಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ವರದಿ ಸಲ್ಲಿಕೆಯಾಗಲಿದೆ. ನಂತರ
ರಸ್ತೆಗಳ ಅಭಿವೃದ್ಧಿ ಕಾರ್ಯಗಳ ತಾಂತ್ರಿಕ ಕೆಲಸಗಳು ಆರಂಭವಾಗಲಿದೆ.ರಾಜ್ಯದ ಒಟ್ಟು ರಸ್ತೆಗಳಿಗೆ ಹಂತ ಹಂತವಾಗಿ DPR ಟೆಂಡರ್ ಕರೆಯಲಾಗಿದ್ದು ಸುಳ್ಯ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಇತರ ಕ್ಷೇತ್ರಗಳ ರಸ್ತೆಗಳಿಗೆ ಹಂತ- 5,ಘಟ್ಟ2-ರಡಿಯಲ್ಲಿ ಕಾಮಗಾರಿಗಳಿಗೆ ಡಿಪಿಆರ್ ಟೆಂಡರ್ ಕರೆಯಲಾಗಿತ್ತು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.












