ಫ್ಲೋರಿಡಾ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಬ್ರೆಜಿಲ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.ವಿನಿಷಿಯಸ್ ಜೂನಿಯರ್ ಎರಡು ಗೋಲುಗಳನ್ನು ಬಾರಿಸಿ ಬ್ರೆಜಿಲ್ ಗೆಲುವಿನ ರೂವಾರಿಯೆನಿಸಿದ್ದಾರೆ. 7, 45ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ,ಬಳಿಕ ಪಂದ್ಯದ
60ನೇ ನಿಮಿಷದಲ್ಲಿ ಗೋಲು ಬಾರಿಸಿ ಮ್ಯಾಥ್ಯೂಸ್ ಗೋಲು ಬಾರಿಸಿದರು. ಜಯದೊಂದಿಗೆ ಬ್ರೆಜಿಲ್ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್ಗೆ ಲಗ್ಗೆ ಇಟ್ಟಿದೆ. ಈ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು ಏಳು ಅಂಕ ಗಳಿಸಿದೆ.ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ 34 ವರ್ಷದ ನೇಮರ್ ಜೂನಿಯರ್ ಕಣಕ್ಕಿಳಿದರು. ಗಾಯಮುಕ್ತಗೊಂಡಿರುವ ನೇಮರ್, 2023ರ ಬಳಿಕ ಮೊದಲ ಬಾರಿ ಬ್ರೆಜಿಲ್ ಪರ ಮೈದಾನಕ್ಕಿಳಿದಿದ್ದಾರೆ.
ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ ಹಾಗೂ ಬೊಸ್ನಿಯಾ ತಂಡಗಳು ಅಂತಿಮ 32ರ ಹಂತಕ್ಕೆ ಪ್ರವೇಶಿಸಿದೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿರುವ ಸ್ವಿಟ್ಜರ್ಲೆಂಡ್ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು.ಈ ಸೋಲಿನ ಹೊರತಾಗಿಯೂ ‘ಬಿ’ ಗುಂಪಿನಲ್ಲಿ ಸ್ವಿಟ್ಜರ್ಲೆಂಡ್ ಜೊತೆಗೆ ಕೆನಡಾ ಹಾಗೂ ಬೊಸ್ನಿಯಾ ಸಹ ಅಂತಿಮ 32ರ ಹಂತಕ್ಕೆ ಪ್ರವೇಶಿಸಿದೆ.ಮತ್ತೊಂದೆಡೆ ‘ಸಿ’ ಗುಂಪಿನಲ್ಲಿ ಬ್ರೆಜಿಲ್ ಜೊತೆಗೆ ಮೊರಕ್ಕೊ ನಾಕೌಟ್ಗೆ ಎಂಟ್ರಿ ಕೊಟ್ಟಿತು. ಹೈಟಿ ವಿರುದ್ಧ ನಡೆದ ಪಂದ್ಯದಲ್ಲಿ ಮೊರಕ್ಕೊ 4-2 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಕತಾರ್ ವಿರುದ್ಧ ಬೊಸ್ನಿಯಾ 3-1 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತ್ತು ಮತ್ತು 32ರ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.ಬೊಸ್ನಿಯಾ, ಮೊದಲ ಬಾರಿಗೆ ಫಿಫಾ ವಿಶ್ವಕಪ್ನಲ್ಲಿ ನಾಕೌಟ್ಗೆ ಲಗ್ಗೆ ಇಟ್ಟಿತು.
ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲಾಗದ ಕತಾರ್, ಒಂದು ಡ್ರಾ ಫಲಿತಾಂಶದೊಂದಿಗೆ ಬರಿ ಒಂದು ಅಂಕದೊಂದಿಗೆ ಮರಳಿತು.
‘ಸಿ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಹೈಟಿ ವಿರುದ್ಧ 4-2 ಗೋಲುಗಳ ಭರ್ಜರಿ ಗೆಲುವು ದಾಖಲಿಸಿರುವ ಮೊರಕ್ಕೊ ನಾಕೌಟ್ಗೆ ಲಗ್ಗೆ ಇಟ್ಟಿತು. ಹೈಟಿ ನಿರ್ಗಮಿಸಿದರೆ ಸ್ಕಾಟ್ಲೆಂಡ್ ತನ್ನ ಅವಕಾಶಕ್ಕಾಗಿ ಇತರೆ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ.
ಇತರ ಪಂದ್ಯದಲ್ಲಿ ಕೊಲಂಬಿಯಾ ತಂಡವು 1–0ಯಿಂದ ಕಾಂಗೊ ರಿಪಬ್ಲಿಕ್ ತಂಡವನ್ನು ಮಣಿಸಿತು.ಸತತ ಎರಡು ಗೆಲುವಿನೊಂದಿಗೆ ಕೊಲಂಬಿಯಾ 32ರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಎಲ್ ಗುಂಪಿನ ಘಾನಾ- ಇಂಗ್ಲೆಂಡ್ ಪಂದ್ಯ ಗೋಲು ರಹಿತ ಡ್ರಾ ಆಯಿತು.
ಟೊರಾಂಟೊದಲ್ಲಿ ಮಂಗಳವಾರ ನಡೆದ ಎಲ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕ್ರೊವೇಷ್ಯಾ ತಂಡ ತೀವ್ರ ಪೈಪೋಟಿಯ ನಂತರ ಪನಾಮಾ ತಂಡವನ್ನು 1–0 ಗೋಲಿನಿಂದ ಸೋಲಿಸಿತು.






