ಸುಳ್ಯ:ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡುವುದಕ್ಕೆ ಶಾಶ್ವತ ತಡೆ ಮಾಡಬೇಕು ಎಂದು ದುಗಲಡ್ಕ ದುಗ್ಗಲಾಯ ಸಭಾಂಗಣದಲ್ಲಿ ನಡೆದ ಕೃಷಿಕರ ಸಭೆ ಒತ್ತಾಯಿಸಿತು. ದುಗಲಡ್ಕ,ಸುಳ್ಯ,ಉಬರಡ್ಕ, ಆರಂತೋಡು, ತೋಡಿಕಾನ, ಸಂಪಾಜೆ, ಮಂಡೆಕೋಲು ಭಾಗದ
ಕೃಷಿಕರು ಭಾಗವಹಿಸಿದ್ದರು. ಪರಿಹಾರೊಪಾಯಗಳ ಬಗ್ಗೆ ಚರ್ಚಿಸಲಾಯಿತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಯಿತು. ಶಾಸಕರು ಹಾಗು ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಬೇಕು ಎಂದು ನಿರ್ಧರಿಸಲಾಯಿತು. ಪ್ರಮುಳರಾದ
ಕೆ.ಪಿ.ಜಗದೀಶ್, ಪ್ರಭಾಕರ ರೈ, ಶಂಬಯ್ಯ ಪಾರೆ, ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ ಸೇರಿ ಪ್ರಮುಖರು ಭಾಗವಹಿಸಿದ್ದರು
























