ಪಂಜ:ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕೂತ್ಕುಂಜ ಘಟ ಸಮಿತಿ ವತಿಯಿಂದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಾಲಯದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರಯ ದೀಪ ಬೆಳಗಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಂಜ ವಲಯದ ಸಂಯೋಜಕರಾದ ಜಯಶ್ರೀ ಪಂಬೆತ್ತಾಡಿ, ಗ್ರಾಮದ ಸೇವಾ ದೀಕ್ಷಿತೆಯಾದ ಸವಿತಾ ನಾಗತೀರ್ಥ, ಘಟ ಸಮಿತಿ ಪದಾಧಿಕಾರಿಗಳಾದ ಕುಮದಾಕ್ಷಿ. ಶೋಭಾ. ಮಂಜುಳಾ. ರವೀಂದ್ರ ಇವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಮಂಜುಳಾ ನಿರೂಪಿಸಿದರು. ಘಟ ಸಮಿತಿಯ ಉಪಾಧ್ಯಕ್ಷೆ ಮಂಜುಳಾ ಸ್ವಾಗತಿಸಿ, ವಂದಿಸಿದರು.












