ಸುಳ್ಯ: ಕನಕಮಜಲು ಕನಕ ಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಗುರು ಪೂರ್ಣಮಾ ಆಚರಣೆ, ಗುರು ಡಾ.ಚೇತನ ರಾಧಾಕೃಷ್ಣ ಅವರ ಶಿಷ್ಯರಿಂದ ನೃತ್ಯ ನಮನ ಹಾಗು ಅಗಲಿದ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಅವರ ಸಂಸ್ಮರಣಾ ಕಾರ್ಯಕ್ರಮವು
ಆ.11 ಮಂಗಳವಾರ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕನಕ ಸೌಧ ಸಭಾಂಗಣದಲ್ಲಿ ನಡೆಯಲಿದೆ. ಸಾಮಾಜಿಕ ಕಾರ್ಯಕರ್ತರಾದ ನ. ಸೀತಾರಾಮ ಕಾರ್ಯಕ್ರವನ್ನು ಉದ್ಘಾಟಿಸುವರು.
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ

ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ ಸೀತಾರಾಮ ಬುಡ್ಡೆಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಎಂದು ಗುರುದೇವ್ ಅಕಾಡೆಮಿಯ
ಕಲಾ ನಿರ್ದೇಶಕರಾದ ಡಾ. ಚೇತನ ರಾಧಾಕೃಷ್ಣ ಪಿ.ಎಂ, ಹಾಗು ವ್ಯವಸ್ಥಾಪಕರಾದ ರಾಧಾಕೃಷ್ಣ ಪಿ.ಎಂ. ತಿಳಿಸಿದ್ದಾರೆ.
























