ಸುಳ್ಯ: ಸುಳ್ಯದ ಕಂದಡ್ಕ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿ ಮಾಡಿದೆ. ಕಳೆದ 4-5 ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ 6 ಆನೆಗಳ ಹಿಂಡು

ಕಂದಡ್ಕ, ನೀರಬಿದಿರೆ, ಕೊಯಿಕುಳಿ, ಕುಂಬೆತ್ತಿ ಬನ ಮತ್ತಿತರ ಭಾಗಗಳಲ್ಲಿ ಕೃಷಿ ಹಾನಿ ಮಾಡಿದೆ. ಉಬರಡ್ಕ ಭಾಗದಲ್ಲಿ ಹಾನಿ ಮಾಡಿದ್ದ ಮರಿ ಸೇರಿ ಇರುವ ಆನೆಗಳ ಹಿಂಡು ಇದೀಗ ಕಂದಡ್ಕ ಭಾಗದಲ್ಲಿ ದಾಳಿ ಮಾಡುತಿದೆ ಎಂದು ಕೃಷಿಕರು ತಿಳಿಸಿದ್ದಾರೆ. ಕಳೆದ ರಾತ್ರಿ ಕಂದಡ್ಕ ಭಾಗದಲ್ಲಿ ಕೃಷಿಕರ ತೋಟಕ್ಕೆ ದಾಳಿ ಮಾಡಿರುವ ಆನೆಗಳ ಹಿಂಡು ತೆಂಗು, ಬಾಳೆ ಸೇರಿ ಕೃಷಿಯನ್ನು ನಾಶಪಡಿಸಿದೆ.












