ಪಂಜ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವರ ಜಂಟಿ ಆಶ್ರಯದಲ್ಲಿ ಆ.9ರಂದು ನಡೆಯುವ ‘ಆಟಿ ನೆಂಪು’ ಕಾರ್ಯಕ್ರಮದ ಸ್ವದೇಶಿ ಖಾದ್ಯ ಮೇಳ ಏರ್ಪಡಿಸಲಾಗಿದೆ.ಆ.7 ರಿಂದ ಆ.9 ವರೆಗೆ ಟೀಮ್ ಉಬಾರ್ ಇವರ ನೇತೃತ್ವದಲ್ಲಿ
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಪಾರ್ವತಿ ಸಭಾಭವನದಲ್ಲಿ ಖಾದ್ಯ ಮೇಳ ಏರ್ಪಡಿಸಲಾಗಿದೆ.ಹಿರಿಯ ಸಾಹಿತಿ ಡಾ. ಪ್ರಭಾಲರ ಶಿಶಿಲ ಉದ್ಘಾಟಿಸಿದರು.ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿ ಪ್ರಸಾದ್ ಚಿಕ್ಮುಳಿ ಅಧ್ಯಕ್ಷತೆ ವಹಿಸಿದ್ದರು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ,ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ,ಪಂಜ ಲಯನ್ಸ್ ಅಧ್ಯಕ್ಷ ಆನಂದ ಗೌಡ ಜಳಕದಹೊಳೆ,
ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಪ್ರಕಾಶ್ ಅಳ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಿ ಪ್ರಸಾದ್ ಚಿಕ್ಮುಳಿ ಸ್ವಾಗತಿಸಿ,ಶಶಿಧರ ಪಳಂಗಾಯ ನಿರೂಪಿಸಿದರು.ಪ್ರಕಾಶ್ ಅಳ್ಪೆ ವಂದಿಸಿದರು.












