ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಆಷಾಡ ತಿಂಗಳ ವಿಶೇಷ ಸಮುದಾಯ ಸಂಗಮ ಕಾರ್ಯಕ್ರಮವು ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ
ಉದ್ಘಾಟನೆಯನ್ನು ಸುಬ್ಬನ್ ಚೆಟ್ಟಿಯಾರ್ ಕಲ್ಮಡ್ಕ ನೆರವೇರಿಸಿದರು. ನಾರಾಯಣ ಪಾಟಾಳಿ ತೋರಣಗಂಡಿ ಉಪನ್ಯಾಸ ನೀಡಿದರು.ಸಭಾ ವೇದಿಕೆಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ನಿವೃತ್ತ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ಶಂಕರ ಮಾಸ್ತರ್ ಮುಕ್ರಂಪಾಡಿ, ಚಂದ ಕುಡೆಕಲ್ಲು ಇದೇ ಸಂಧರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಚಿತ್ ಕಲ್ಮಡ್ಕ ಹಾಗೂ ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿ ಗೋಪಾಲಕೃಷ್ಣ ಮೊರಂಗಲ್ಲು ವಂದಿಸಿದರು.
ಆಟಿ ಮಾಸದ ತಿನಿಸುಗಳ ಸಹ ಭೋಜನ ನಡೆಯಿತು.
























