ಸುಳ್ಯ:ಸುಳ್ಯ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಗಾಂಧಿನಗರ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯೊತ್ಸವದ ಅಂಗವಾಗಿ ಆಯೋಜಿಸಿದ ಇಂಡಿಪೆಂಡೆನ್ಸ್ ಪುಟ್ಬಾಲ್ ಪಂದ್ಯಾಟ ಗಾಂಧಿನಗರ ಕೆಪಿಎಸ್ ಶಾಲೆ ಮೈದಾನದಲ್ಲಿ ನಡೆಯಿತು.ಪಂದ್ಯಾಟದಲ್ಲಿ ಸಹರಾ ಯುನೈಟೆಡ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.ಮಾರ್ಕೆಟ್ ಬಾಯ್ಸ್ ತಂಡ
ರನ್ನರ್ ಅಪ್ ಪಡೆದುಕೊಂಡಿತು.ವಿಜೇತ ತಂಡಗಳಿಗೆ ದ.ಕ ಜಿಲ್ಲಾ ಮೀಫ್ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ಸುಳ್ಯ ನಗರ ಪಂಚಾಯತ್ ಸದಸ್ಯ ಸಿದ್ದೀಕ್ ಕೊಕ್ಕೊ,ಸುಳ್ಯ ಸರಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಶಹೀದ್, ಗಾಂಧಿನಗರ ಶಾಲೆ ಹಳೇ ವಿದ್ಯಾರ್ಥಿ ಸಂಘದ
ಸಹರಾ ಯುನೈಟೆಡ್ ತಂಡ
ಮಾರ್ಕೆಟ್ ಬಾಯ್ಸ್ ತಂಡ
ಅಧ್ಯಕ್ಷ ಕೆ ಬಿ ಇಬ್ರಾಹಿಂ, ಕಟ್ಟೆಕ್ಕಾರ್ ಗ್ರೂಪ್ಸ್ ನ ಪೈಸಲ್ ಕಟ್ಟೆಕ್ಕಾರ್,ಅಂಚು ನಾವೂರು,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಬಹುಮಾನ ವಿತರಿಸಿದರು.
ಸುಳ್ಯ ಯುನೈಟೆಡ್ ಅಧ್ಯಕ್ಷ ಶರೀಫ್ ಕಂಠಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ಸುಳ್ಯದಲ್ಲಿ ಸರ್ಕಾರದ ಸಹಕಾರದೊಂದಿಗೆ ಉತ್ತಮ ಪುಟ್ಬಾಲ್ ಕ್ಯಾಂಪ್ ಮಾಡಿ ಹಲವಾರು ಪ್ರತಿಭೆಗಳನ್ನು ಕೆಲಸವನ್ನು ಮಾಡುತ್ತೆವೆ ಅದರ ಮೂಲಕ ಒಳ್ಳೆಯ ಪ್ರತಿಭೆಗಳನ್ನು ಹೊರತರುವ ಬಗ್ಗೆ ಮಾಹಿತಿ ನೀಡಿದರು.
ಸಹರಾ ಯುನೈಟೆಡ್ ಮುನಾಫರ್ ಕಾರ್ಯಕ್ರಮ ನಿರೂಪಿಸಿದರು.