ನವದೆಹಲಿ: ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ಒಮ್ಮೆಲೆ 993 ರೂ. ಏರಿಕೆ ಮಾಡಲಾಗಿದೆ.ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಬಳಕೆ ಮಾಡುವ ವಾಣಿಜ್ಯ ಎಲ್ಪಿಜಿಯ ಬೆಲೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ
3,071.5ಗೆ ತಲುಪಿದೆ. ಈ ಹಿಂದೆ 2,078.50ರಷ್ಟಿತ್ತು.
ಏಪ್ರಿಲ್ 1ರಂದು 195.50 ಹೆಚ್ಚಿಸಲಾಗಿತ್ತು. ಅದಕ್ಕೂ ಮುನ್ನ ಮಾರ್ಚ್ 1ರಂದು 114.5 ಹೆಚ್ಚಿಸಲಾಗಿತ್ತು. ಒಟ್ಟಾರೆಯಾಗಿ ವಾಣಿಜ್ಯ ಬಳಕೆಯ ಎಲ್ಪಿಜಿ ದರಗಳು ಕಳೆದ ಮೂರು ಬಾರಿಯಾಗಿ
1,303 ಏರಿಕೆ ಕಂಡಿದೆ.ಆದರೆ ಗೃಹ ಬಳಕೆಯ 14.2 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೊನೆಯದಾಗಿ ಮಾರ್ಚ್ 7ರಂದು 60 ಹೆಚ್ಚಿಸಲಾಗಿತ್ತು.
ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಕಿನಂದು ಎಲ್ಪಿಜಿ ಮತ್ತು ಎಟಿಎಫ್ ದರ ಪರಿಷ್ಕರಿಸುತ್ತವೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಅಡಚಣೆಯುಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಶೇ 50ರಷ್ಟು ಹೆಚ್ಚಾಗಿದೆ.ಸದ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಬದಲಾವಣೆಯಾಗಿಲ್ಲ.













