ಜೈಪುರ:ಹದಿನೈದು ವರ್ಷದ ಬಾಲಕ ವೈಭವ್ ಸೂರ್ಯವಂಶಿ ಸಿಡಿಸಿದ ಸ್ಪೋಟಕ ಶತಕಕ್ಕೆ ಜಯ ಒಲಿಯಲಿಲ್ಲ. ಅಭಿಷೇಕ್ ಶರ್ಮಾ– ಇಶಾನ್ ಕಿಶಾನ್ ಅವರ ಶತಕದ ಜೊತೆಯಾಟದ ಬಲದಿಂದ
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 5 ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.
36 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಅವರ ಆಟದಿಂದ
ರಾಜಸ್ಥಾನ ರಾಯಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 228 ರನ್ ಗಳಿಸಿತು.ಕಠಿಣ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡವು ಅಭಿಷೇಕ್ ಹಾಗೂ ಇಶಾನ್ 55 ಎಸೆತ ಗಳಲ್ಲಿ 132 ರನ್ ಸೇರಿಸಿ, ಆಸರೆಯಾದರು. ಅಭಿಷೇಕ್ 29 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಸಿಡಿಸಿದರೆ, ಇಶಾನ್ 31 ಎಸೆತಗಳಲ್ಲಿ 74 ರನ್ ಸೂರೆಮಾಡಿದರು. ಅವರ ಇನಿಂಗ್ಸ್ನಲ್ಲಿ 11 ಬೌಂಡರಿ, 3 ಸಿಕ್ಸರ್ ಇದ್ದವು.ಹೆನ್ರಿಚ್ ಕ್ಲಾಸೆನ್ (29; 24ಎ) ಹಾಗೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (36; 18ಎ) 53 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಸಲೀಲ್ ಅರೋರಾ ಗೆಲುವಿನ ಸಿಕ್ಸರ್ ಹೊಡೆದರು.ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ತಂಡ ಇನ್ನೂ 9 ಎಸೆತ ಬಾಕಿ ಇರುವಂತೆ 5 ವಿಕೆಟ್ಗೆ 229 ರನ್ ಹೊಡೆದು ಸಂಭ್ರಮಿಸಿತು.
ಇದಕ್ಕಿಂತ ಮೊದಲು ವೈಭವ್ ಸೂರ್ಯವಂಶಿವೈಭವ್ 12 ಸಿಕ್ಸರ್. 5 ಬೌಂಡರಿ ಹೊಡೆದರು. 37 ಎಸೆತಗಳಲ್ಲಿ 103 ರನ್ ಗಳಿಸಿ ಔಟಾದರು.
ಐಪಿಎಲ್ನಲ್ಲಿ ಮೂರನೇ ಅತಿವೇಗದ ಶತಕ (36ಎ) ಇದಾಗಿದೆ. ಐಪಿಎಲ್ನಲ್ಲಿ ವೈಭವ್ ಎರಡನೇ ಶತಕ ಇದು.ವೈಭವ್ ಅವರು ಹೋದ ವರ್ಷ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಸ್ ಗೇಲ್ ಅವರು 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಎಸ್ಆರ್ಎಚ್ ಪರ ಧ್ರುವ್ ಜುರೆಲ್(51) ಅರ್ಧ ಶತಕ,ಡೊನೊವನ್ ಫೆರಿರಾ 33 ರನ್ ಗಳಿಸಿದರು.












