ಸುಳ್ಯ:ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ್ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಪೋಲೀಸ್ ವೃತ್ತ ನಿರೀಕ್ಷಕರಾಗಿರುವ
ತಿಮ್ಮಪ್ಪ ನಾಯ್ಕರನ್ನು ಸುಳ್ಯಕ್ಕೆ ವರ್ಗಾಯಿಸಿ ಸರಕಾರ ಆದೇಶ ಮಾಡಿದೆ. ಸುಳ್ಯ ಇನ್ಸ್ ಪೆಕ್ಟರ್ ಆಗಿದ್ದ ಸತ್ಯನಾರಾಯಣ ಕೆ.ಯವರು ವರ್ಗಾವಣೆಗೊಂಡ ಬಳಿಕ, ಪುತ್ತೂರಿನವರಿಗೆ ಪ್ರಭಾರ ವಹಿಸಲಾಗಿತ್ತು. ಇದೀಗ ಸುಳ್ಯಕ್ಕೆ ತಿಮ್ಮಪ್ಪ ನಾಯ್ಕರನ್ನು ಸರಕಾರ ವರ್ಗಾಯಿಸಿ ಆದೇಶ ಮಾಡಿದೆ ಎಂದು ತಿಳಿದು ಬಂದಿದೆ.