ಸುಳ್ಯ: ಬಿಜೆಪಿ ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳನ್ನು ಘೋಷಿಸಲಾಗಿದೆ. ಅದರಂತೆ, ವಿವಿಧ ಭಾಷಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಸುಳ್ಯದ ಬಿಜೆಪಿ ಮುಖಂಡ ಸುರೇಶ್ ಕಣೆಮರಡ್ಕ ಅವರನ್ನು ನೇಮಕ ಮಾಡಲಾಗಿದೆ. ಸಹ ಸಂಚಾಲಕರಾಗಿ
ಮಂಗಳೂರು ದಕ್ಷಿಣ ಮಂಡಲದ ರಮೇಶ್ ಪಟೇಲ್ ಅವರನ್ನು ನೇಮಿಸಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರ ಹೆಸರುಗಳನ್ನು ಘೋಷಿಸಿದರು.ವಿಭಿನ್ನ ಪ್ರಕೋಷ್ಠಗಳಿಗೆ ಸುಳ್ಯ ಮಂಡಲದ ಕೆಲವರನ್ನು ನೇಮಕಾತಿಗಳು ಮಾಡಲಾಗಿದೆ.ಪಂಚಾಯತ್ ರಾಜ್ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಸುಳ್ಯ ವಿಧಾನಸಭಾ ವ್ಯಾಪ್ತಿಯ ನೆಲ್ಯಾಡಿಯ ಬಾಲಕೃಷ್ಣ ಬಾಣಜಾಲು, ನಗರಾಡಳಿತ ಪ್ರಕೋಷ್ಠದ ಸಹ ಸಂಚಾಲಕರಾಗಿ ಸುಳ್ಯದ ಅವಿನಾಶ್ ಕುರುಂಜಿಯವರನ್ನು ನೇಮಕ ಮಾಡಲಾಗಿದೆ.ಈ ನೇಮಕಾತಿಗಳ ಮೂಲಕ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.













