ಟೆಹರಾನ್:ಲೆಬನಾನ್– ಇಸ್ರೇಲ್ ಕದನ ವಿರಾಮದ ಉಳಿದ ಅವಧಿವರೆಗೆ (ಏ.27ರವರೆಗೆ) ಹೊರ್ಮುಜ್ ಜಲಸಂಧಿಯನ್ನು ಎಲ್ಲ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣವಾಗಿ ಮುಕ್ತಗೊಳಿಸಲಾಗಿದೆ’ ಎಂದು
ಇರಾನ್ ಫೋಷಿಸಿದೆ.ಜಲಸಂಧಿಯ ಮೂಲಕ ಹಡಗುಗಳ ಸಂಚಾರವು ಇರಾನ್ನ ಬಂದರು ಮತ್ತು ಕಡಲ ಸಂಸ್ಥೆ ಈಗಾಗಲೇ ಘೋಷಿಸಿರುವ ಮಾರ್ಗದಲ್ಲೇ ಇರಲಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೆಬನಾನ್–ಇಸ್ರೇಲ್ 10 ದಿನಗಳ ತಾತ್ಕಾಲಿಕ ಕದನ ವಿರಾಮ ಗುರುವಾರದಿಂದ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಇರಾನ್ ಈ ಮಹತ್ವದ ಘೋಷಣೆ ಮಾಡಿದೆ.
















