ಸುಳ್ಯ: ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷ ಪಿ.ಎಸ್.ಗಂಗಾಧರ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಹಲವು ಮಂದಿ ಪ್ರಮುಖರು ಆಗಮಿಸಿ ನೂತನ ಅಧ್ಯಕ್ಷರು ಹಾಗು
ಸದಸ್ಯರನ್ನು ಅಭಿನಂದಿಸಿರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಪ್ರಮುಖರಾದ ಪಿ.ಸಿ.ಜಯರಾಮ, ನಿತ್ಯಾನಂದ ಮುಂಡೋಡಿ, ಸೋಮಶೇಖರ ಕೊಯಿಂಗಾಜೆ, ಸುರೇಶ್ ಎಂ.ಎಚ್, ಎಂ.ವೆಂಕಪ್ಪ ಗೌಡ, ತಿರುಮಲೇಶ್ವರಿ ಅರ್ಭಡ್ಕ,

ನಂದರಾಜ ಸಂಕೇಶ, ದಿನೇಶ್ ಸರಸ್ವತಿ ಮಹಲ್, ಅಬ್ದುಲ್ ಗಫೂರ್ ಕಲ್ಮಡ್ಕ, ಭವಾನಿಶಂಕರ ಅಡ್ತಲೆ, ಅಶೋಕ್ ಚೂಂತಾರು, ಮಹಮ್ಮದ್ ಕುಂಞಿ ಗೂನಡ್ಕ, ವಿಜೇಶ್ ಹಿರಿಯಡ್ಕ, ಜಿ.ಕೆ.ಹಮೀದ್, ತೀರ್ಥರಾಮ ಅಡ್ಕಬಳೆ,ಸೋಮಶೇಖರ ಕೇವಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮಾತನಾಡಿದರು.
ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಪಿ.ಎಸ್.ಗಂಗಾಧರ ಈ ಹಿಂದಿನ ಗ್ಯಾರಂಟಿ ಅನುಷ್ಠಾನ ಸಮಿತಿ ಉತ್ತಮ ಕೆಲಸ ಮಾಡಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದರು.








