ಸುಳ್ಯ: ವಿವಿಧ ಮದ್ರಸ ಕಟ್ಟಡ, ಮಸೀದಿ ನವೀಕಾರಣ ಕಾಮಗಾರಿಗಳಿಗೆ ವಕ್ಫ್ ಇಲಾಖೆಯಿಂದ 20 ಲಕ್ಷ ಅನುದಾನ ಮಂಜೂರಾಗಿದೆ.
ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾಮಸೀದಿಯ ನವೀಕರಣಕ್ಕೆ ರೂ.5 ಲಕ್ಷ, ತೆಕ್ಕಿಲ್ ಮೊಹಮ್ಮದ್ ಹಾಜಿ ಮೆಮೋರಿಯಲ್
ತಖ್ವಿಯತ್ತುಲ್ ಇಸ್ಲಾಂ ಮದರಸ ಪೇರಡ್ಕ ಇದರ ದುರಸ್ತಿ ಕಾರ್ಯಕ್ಕೆ ರೂ. 5 ಲಕ್ಷ, ಅರಂತೋಡು ಬದ್ರಿಯಾ ಜುಮಾ ಮಸೀದಿಯ ನವೀಕರಣಕ್ಕೆ ರೂ. 5 ಲಕ್ಷ ಮತ್ತು ನುಸ್ರತುಲ್ ಇಸ್ಲಾಂ ಮದರಸ ಕಟ್ಟಡ ಕಾಮಗಾರಿಗೆ ರೂ. 5 ಲಕ್ಷ, ಈ ಅನುದಾನ ಮಂಜೂರಾಗಿದೆ. ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮನವಿ ಮೇರೆಗೆ ವಕ್ಫ್ ಮತ್ತು ದ .ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಅನುದಾನ ಮಂಜೂರು ಮಾಡಿದ್ದಾರೆ ಎಂದು ಅರಂತೋಡು ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ ತಿಳಿಸಿದ್ದಾರೆ.















