ಬನಾರಿ:ಹಿರಿಯ ಕಲಾವಿದ ಮುದಿಯಾರು-ಚಾವಡಿ ತಿಮ್ಮಪ್ಪ ಗೌಡರ ಸಂಸ್ಮರಣೆ ಹಾಗೂ ತುಳು ಯಕ್ಷಗಾನ ತಾಳಮದ್ದಳೆಯು
ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ನಡೆಯಿತು. ಪುತ್ತೂರು ತುಳು ಅಪ್ಪೆ ಕೂಟ ಅವರಿಂದ
‘ತುಳುನಾಡ ಬಲಿಯೇಂದ್ರ’ ಯಕ್ಷಗಾನ ತಾಳಮದ್ದಳೆಯು ತುಳು ಭಾಷೆಯಲ್ಲಿ ಪ್ರಸ್ತುತಗೊಂಡಿತು.ಸ್ಥಳಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜೆಯು ಶ್ರೀ ರಾಮ ಗೀತಾಧ್ಯಯನ ದೇಲಂಪಾಡಿ ಅವರ ಗೀತಾ ಪಾರಾಯಣದೊಂದಿಗೆ ಮೂಡಿ ಬಂತು. ಕಲಾ ಸಂಘದ

ಕಾರ್ಯದರ್ಶಿ ವಿಶ್ವ ವಿನೋದ ಬನಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ಮಾಸ್ತರ್ ದೇಲಂಪಾಡಿ ದಿ.ತಿಮ್ಮಪ್ಪ ಗೌಡರ ಸಂಸ್ಮರಣೆ ಮಾಡಿದರು.ತುಳು ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ನಳಿನಾಕ್ಷಿ ಮುದಿಯಾರು ಸ್ವಾಗತಿಸಿದರು.ಶಾಂತಾ ಕುಮಾರಿ ಚೆಂಡಮೂಲೆ ನಿರೂಪಿಸಿದರು.ಎಂ. ರಮಾನಂದ ರೈ ದೇಲಂಪಾಡಿ ವಂದಿಸಿದರು. ಈಶ್ವರಿ ಪೃಥ್ವಿ ಬನಾರಿ ಮತ್ತು ಸಂಜನಾ ರೆಂಜಾಳ ಪ್ರಾರ್ಥನಾ ಗೀತೆ ಹಾಡಿದರು. ಕುಸುಮ ತಿಮ್ಮಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಳಮದ್ದಳೆಯಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆ ಮದ್ದಳೆ ಚಕ್ರತಾಳ ವಾದನಗಳಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು,ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು.
ಆರ್ಥಧಾರಿಗಳಾಗಿ ಹರಿಣಾಕ್ಷಿ ಜೆ. ಶೆಟ್ಟಿ, ಶ್ರೀಶಾವಾಸವಿ ತುಳುನಾಡ್, ಭಾರತಿ ರೈ ಕೌಡಿಚ್ಚಾರ್, ಶುಭಾ ಗಣೇಶ್, ಪ್ರೇಮಲತಾ ರಾವ್ ಅವರು ತಮ್ಮ ಕಲಾ ಪ್ರೌಢಿಮೆ ಮತ್ತು ತುಳು ಭಾಷೆಯ ಹಿಡಿತದಿಂದ ಗಮನಸೆಳೆದರು. ನಂದಕಿಶೋರ ಬನಾರಿ ಅವರು ವಂದಿಸಿದರು.








