ಬೆಂಗಳೂರು:ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಇದೀಗ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆಯನ್ನು ಅ.9ಕ್ಕೆ ಪ್ರಕಟಿಸಿತ್ತು. ಬಳಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯ ಬದಲಾವಣೆಯೊಂದಿಗೆ
ಅಂತಿಮ ಮೀಸಲಾತಿ ಪ್ರಕಟಿಸಿದೆ. ಸುಳ್ಯ ತಾಲೂಕಿನಲ್ಲಿ 3 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, 11 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ.
ಜಿ.ಪಂ.ಕ್ಷೇತ್ರಗಳಲ್ಲಿ
1 ಬೆಳ್ಳಾರೆ ಜಿ.ಪಂ.ಕ್ಷೇತ್ರ- ಸಾಮಾನ್ಯ ಮಹಿಳೆ,
2 ಜಾಲ್ಸೂರು ಜಿ.ಪಂ.ಕ್ಷೇತ್ರ- ಸಾಮಾನ್ಯ.
3 ಗುತ್ತಿಗಾರು ಜಿ.ಪಂ.ಕ್ಷೇತ್ರ- ಸಾಮಾನ್ಯ ಮಹಿಳೆ ವಿಭಾಗಕ್ಕೆ ಮೀಸಲಾಗಿದೆ. ಕರಡು ಪಟ್ಟಿಯಲ್ಲಿ ಈ ಕ್ಷೇತ್ರ ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಾಗಿತ್ತು. ಇದೀಗ ಸಾಮಾನ್ಯ ಮಹಿಳೆ ವಿಭಾಗಕ್ಕೆ ನೀಡಲಾಗಿದೆ.
ಸುಳ್ಯ ತಾಲೂಕು ಪಂಚಾಯತ್ನಲ್ಲಿ 11 ಸ್ಥಾನಗಳಿದ್ದು 6 ಸ್ಥಾನ ಮಹಿಳೆಗೆ ಮೀಸಲಾಗಿದೆ.
ಸಾಮಾನ್ಯ ವರ್ಗಕ್ಕೆ 6 ಸ್ಥಾನ ಇದೆ(3 ಮಹಿಳೆ), ಅನುಸೂಚಿತ ಜಾತಿ 2(1ಮಹಿಳೆ), ಅನುಸೂಚಿತ ಪಂಗಡ1(ಮಹಿಳೆ), ಹಿಂದುಳಿದ ವರ್ಗ ಎ 2(1 ಮಹಿಳೆ) ಎಂಬಂತೆ ಮ ಪ್ರಕಟವಾಗಿದೆ.
1 ಬೆಳ್ಳಾರೆ-ಅನುಸೂಚಿತ ಜಾತಿ.
2 ಬಾಳಿಲ-ಸಾಮಾನ್ಯ ಮಹಿಳೆ.
3 ಐವರ್ನಾಡು-ಸಾಮಾನ್ಯ.
4 ಜಾಲ್ಸೂರು-ಸಾಮಾನ್ಯ ಮಹಿಳೆ.
5 ಅಜ್ಜಾವರ-ಅನುಸೂಚಿತ ಜಾತಿ ಮಹಿಳೆ.
6 ಆಲೆಟ್ಟಿ-ಅನುಸೂಚಿತ ಪಂಗಡ ಮಹಿಳೆ.
7 ಅರಂತೋಡು- ಹಿಂದುಳಿದ ವರ್ಗ ಎ ಮಹಿಳೆ.
8 ಮಡಪ್ಪಾಡಿ- ಸಾಮಾನ್ಯ,
9 ನೆಲ್ಲೂರು ಕೆಮ್ರಾಜೆ- ಸಾಮಾನ್ಯ ಮಹಿಳೆ
10 ಗುತ್ತಿಗಾರು-ಹಿಂದುಳಿದ ವರ್ಗ ಎ
11 ಪಂಜ- ಸಾಮಾನ್ಯ ವರ್ಗ ಕ್ಕೆ ಮೀಸಲಾಗಿದೆ.
ತಾಲೂಕು ಪಂಚಾಯತ್ ಮೀಸಲಾತಿಯಲ್ಲಿ ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ ಯಾವುದೇ ಬದಲಾವಣೆ ಆಗಿಲ್ಲ.
















