ಸುಳ್ಯ:ಬುಧವಾರ ರಾತ್ರಿ ಬೀಸಿದ ಗಾಳಿ ಮತ್ತು ಸುರಿದ ಮಳೆಗೆ ಮರ ಮುರಿದು ಆಲೆಟ್ಟಿ ಗ್ರಾಮದ ಚಳ್ಳಂಗಾರು ದೇವಿದಾಸ್ ಅವರ ಮನೆಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ
ಐದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದು ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗಾಯಗೊಂಡಿರುವ ಮನೆಯ ಸದಸ್ಯರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಂದರ್ಭದಲ್ಲಿ ಪ್ರಮುಖರಾದ ಜಯಪ್ರಕಾಶ ಕುಂಚಡ್ಕ, ಹರೀಶ ಕಂಜಿಪಿಲಿ, ಚಿದಾನಂದ ಕೋಲ್ಚಾರು, ಮತ್ತಿತರರು ಇದ್ದರು.















