ಸುಳ್ಯ:ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ-2 ಇದರ ನೇತೃತ್ವದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಅ.5ರಂದು ನಡೆಯುವ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮದ ಪ್ರಥಮ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಜಿಲ್ಲಾಧ್ಯಕ್ಷರಾದ
ವಿಶ್ವನಾಥ ರೈ ಕಳಂಜ ಮತ್ತು ಜಿಲ್ಲಾ ವೇದಿಕೆಯ ಸದಸ್ಯರು ನೀಡಿ ಆಶೀರ್ವಾದ ಪಡೆದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಬಾಬು ನಾಯ್ಕ, ಸುಳ್ಯ ತಾಲೂಕು ವೇದಿಕೆ ಅಧ್ಯಕ್ಷ ವೆಂಕಪ್ಪಗೌಡ, ಕಡಬ ತಾಲೂಕು ವೇದಿಕೆ ಅಧ್ಯಕ್ಷರಾದ ಇಂದುಶೇಖರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್,
ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಸುಳ್ಯ ತಾಲೂಕಿನ ಜಿಲ್ಲಾ ವೇದಿಕೆಯ ಕೋ ಆಪ್ಟ್ ಸದಸ್ಯರಾದ ವಿಶ್ವನಾಥ ಗೌಡ ಕಲ್ಲಂಬಿ, ಬೂಡು ರಾಧಾಕೃಷ್ಣ ರೈ,ತಾಲೂಕು ಯೋಜನಾಧಿಕಾರಿ ಮಾಧವ ಗೌಡ ತಾಲೂಕು ವೇದಿಕೆಯ ಕೋ ಆಪ್ಟ್ ಸದಸ್ಯರಾದ ಸುಬ್ಬ ಪಾಟಾಳಿ,ಪದ್ಮನಾಭ ಜೈನ್,ಮಲ್ಲೇಶ್ ಬೆಟ್ಟಂಪಾಡಿ, ಮಾಧವ ಚಾಂತಾಳ ಸುಳ್ಯ ವಲಯದ ವಲಯಾಧ್ಯಕ್ಷ ಮನೋಹರ್. ಕೆ, ಗಿರೀಶ್ ಉಪಸ್ಥಿತರಿದ್ದರು.









