ಸುಳ್ಯ:ಸುಳ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ನಿರ್ಮಾಣ ಮಾಡಲಾಗುತ್ತಿರುವ 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಸುಳ್ಯ ತಾಲೂಕು ಪಂಚಾಯತ್ನಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.110 ಕೆವಿ ಲೈನ್ ಎಳೆಯಲು ಒಟ್ಟು
89 ಟವರ್ಗಳು ನಿರ್ಮಾಣ ಆಗಬೇಕಾಗಿದ್ದು ಇದರಲ್ಲಿ 57 ಟವರ್ಗಳ ಫೌಂಡೇಶನ್ ಕಾಮಗಾರಿ ಪೂರ್ತಿಗೊಂಡಿದೆ.6 ಟವರ್ಗಳ ನಿರ್ಮಾಣ ಮಾಡಲಾಗಿದೆ. 32 ಟವರ್ಗಳ ಪೌಂಡೇಷನ್ ಆಗಬೇಕಾಗಿದೆ. ಕಾರಿಡಾರ್ ಸರ್ವೇ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭಿಸಲಾಗುವುದು.
ಸಬ್ ಸ್ಟೇಷನ್ ಕಾಮಗಾರಿ ಶೆ.90 ಪೂರ್ತಿಯಾಗಿದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ಗಳು ಸಭೆಗೆ ಮಾಹಿತಿ ನೀಡಿದರು. ಕಾಮಗಾರಿ ನಡೆಸಲು ಇರುವ ತಡೆಗಳನ್ನು ಪರಿಹರಿಸಿ ಕಾಮಗಾರಿ ಆದಷ್ಟು ಬೇಗ ನಡೆಸಬೇಕು ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡಬೇಕು ಎಂದು ಭಾಗೀರಥಿ ಮುರುಳ್ಯ ಹಾಗೂ ಕೆಪಿಟಿಸಿಎಲ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.ಮುಂದಿನ

ಮಾರ್ಚ್ ವೇಳೆಗೆ ಕಾಮಗಾರಿ ಮುಗಿಸುವ ಪ್ರಯತ್ನ ನಡೆಸಲಾಗುವುದು ಎಂದು ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಚೈತನ್ಯ ತಿಳಿಸಿದರು.
ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಜಯಪ್ರಸಾದ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ
ಶ್ರೀನಾಥ್ ಆಚಾರ್ಯ, ಸಚಿನ್ ಕುಮಾರ್, ಸಹಾಯಕ ಇಂಜಿನಿಯರ್ ವಿಷ್ಣು ನಾಯರ್, ಗುತ್ತಿಗೆದಾರ ಚಂದ್ರಶೇಖರ,
ಭೂದಾಖಲೆಗಳ ಸಹಾಯಕ ನಿರ್ದೇಶಕ, ಶ್ರೀನಿವಾಸಮೂರ್ತಿ, ತಾಲೂಕು ಸರ್ವೆಯರ್, ಜಗದೀಶ್.ಜಿ, ಪುತ್ತೂರು ಎಸಿ ಕಚೇರಿಯ ವ್ಯವಸ್ಥಾಪಕ ನಾಗೇಂದ್ರ, ಪುತ್ತೂರು ತಾಲೂಕು ಕಚೇರಿಯ ಚೆನ್ನಪ್ಪ,
ಶಾಸಕರ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾದ್ ಕಾಟೂರ್ ಮತ್ತಿತರರು ಉಪಸ್ಥಿತರಿದ್ದರು.









