ಸುಳ್ಯ: ಫ್ರೆಂಡ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಮೇ.9 ರಿಂದ 12 ತನಕ ಸುಳ್ಯದಲ್ಲಿ ಫುಡ್ ಫೆಸ್ಟ್ (ಆಹಾರ ಮೇಳ) ನಡೆಯಲಿದೆ. ವೈವಿಧ್ಯ ರುಚಿಯ ಫುಡ್ ಫೆಸ್ಟ್ ಪ್ರಥಮ ಬಾರಿಗೆ ಸುಳ್ಯದಲ್ಲಿ ನಡೆಯಲಿದೆ. ಫುಡ್ ಫೆಸ್ಟ್ನ ಕರ ಪತ್ರ ಬಿಡುಗಡೆ ಕಾರ್ಯಕ್ರಮ ಅಂಬಟೆಡ್ಕದಲ್ಲಿರುವ ಶ್ರೀ ವೆಂಕಟರಮಣ ದೇವ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಅನೂಪ್ ಪೈ ಮಾತನಾಡಿ ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ
ಆಹಾರ ಮೇಳವನ್ನು ಆಯೋಜಿಸಲಾಗಿದೆ.
ದ.ಕ ಮತ್ತು ಉಡುಪಿ,ಕುಂದಾಪುರ ಮತ್ತು ಕಾಸರಗೋಡಿನ ಆಹಾರ ಖಾದ್ಯಗಳ ಸ್ಟಾಲ್ಗಳು ಇರುವುದಲ್ಲದೆ ಜನರ ಅಭಿರುಚಿಗೆ ತಕ್ಕಂತೆ
ಶುದ್ಧ ಸಸ್ಯಹಾರಿ ಮತ್ತು ಮಾಂಸಾಹಾರಿ ವಿವಿಧ ಬಗೆಯ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿಲಭ್ಯವಿರುತ್ತದೆ.
ಸಸ್ಯಹಾರಿ ಮತ್ತು ಮಾಂಸಾಹಾರಿ ಕೌಂಟರ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ನಾಲ್ಕು ದಿನಗಳ ಕಾಲ ಸಂಜೆ 4.00 ಗಂಟೆಯಿಂದ ಸ್ಟಾಲ್ ಗಳು ತೆರೆಯಲ್ಪಡುತ್ತದೆ.ವಿಶೇಷ ಆಕರ್ಷಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು

ತಿಳಿಸಿದರು.ಫುಡ್ ಫೆಸ್ಟ್ ಎಲ್ಲಾ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುತ್ತಿರುತ್ತದೆ. ಸುಳ್ಯದಲ್ಲಿ ಹೊಸ ಪ್ರಯೋಗವಾಗಿದೆ. ಮುಂದೆ ಪ್ರತಿ ವರ್ಷ ನಡೆಸಿಕೊಂಡು ಹೋಗುವ ಆಲೋಚನೆ ಇದೆ. ವಿವಿಧ ಪ್ರದೇಶದ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಸವಿಯುವ ಅವಕಾಶ ಸುಳ್ಯದ ಜನತೆಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಥಮ ಪ್ರಯೋಗ ಇದಾಗಿದೆ ಎಂದು ಹೇಳಿದರು.
ಕ್ಲಬ್ನ ಪದಾಧಿಕಾರಿ ಗುರುದತ್ ನಾಯಕ್ ‘ಮಾತನಾಡಿ’ ಫುಡ್ ಫೆಸ್ಟ್ನ ಜೊತೆಗೆ ವಿಶೇಷವಾಗಿ ಪೆಟ್ ಶೋ ,ಡಾನ್ಸ್, ಮ್ಯೂಸಿಕಲ್ ನೈಟ್,ಮೈಮ್ ಶೋ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಚಿತ ಪ್ರವೇಶವಿದ್ದು ಸುಳ್ಯದ ಜನತೆಯ ಸಹಕಾರ ಬೇಕು ಎಂದು ಹೇಳಿದರು.
ಯುವ ಉದ್ಯಮಿ ಶೈಲೇಂದ್ರ ಸರಳಾಯ ಫುಡ್ ಫೆಸ್ಟ್ನ ಕರ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ ಜಿ.ಜಿ.ನಾಯಕ್, ನವನೀತ್ ಎಂಟರ್ ಪ್ರೈಸಸ್ ಮಾಲಕ ಕೇಶವ ನಾಯಕ್ ಸುಳ್ಯ, ಇಂಜಿನಿಯರ್ ಸೂರಜ್ ಕೊಡಿಯಾಲಬೈಲು, ಶರತ್ ಪರಿವಾರಕಾನ, ಸತೀಶ್ ಅರಂಬೂರು ಮತ್ತಿತರರು ಉಪಸ್ಥಿತರಿದ್ದರು.