ನವದೆಹಲಿ:ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಹಾಗೂ ಅಸ್ಸಾಂ ವಿಧಾಸಭೆಗಳಿಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ತಮಿಳುನಾಡಿನಲ್ಲಿ
ಎಐಎಡಿಎಂಕೆ–ಬಿಜೆಪಿ ನೇತೃತ್ವದ ಎನ್ಡಿಎ, ಆಡಳಿತಾರೂಢ ಡಿಎಂಕೆ ಮತ್ತು ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಣಾಹಣಿಗೆ ವೇದಿಕೆಯಾಗಿದ್ದು, ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ.
ಪಶ್ಚಿಮ ಬಂಗಾಳದಲ್ಲಿ
2011ರಿಂದಲೂ ಅಧಿಕಾರದಲ್ಲಿರುವ ಟಿಎಂಸಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಡುವಣ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಗೆ ಅಧಿಕಾರ ಸಿಗಬಹುದು ಎಂಬುದು ಮತದಾನೋತ್ತರ ಸಮೀಕ್ಷೆಗಳ ಅಂದಾಜು ಆಗಿದೆ.
ಕೇರಳದಲ್ಲಿ ಆಡಳಿತಾರೂಢ ಸಿಪಿಐ ನೇತೃತ್ವದ ಎಲ್ಡಿಎಫ್ ಮೈತ್ರಿಕೂಟ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರಕೂಟ ಹಾಗೂ ಬಿಜೆಪಿ ಮುಂದಾಳತ್ವದ ಎನ್ಡಿಎ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ಬಾರಿ, ಯುಡಿಎಫ್ ಸರ್ಕಾರ ಬರಬಹುದು ಎಂಬುದು ಮತಗಟ್ಟೆ ಸಮೀಕ್ಷಗಳ ಅಂದಾಜು ಆಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇರುವ ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೇರಲಿದೆ ಎನ್ನಲಾಗುತ್ತಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ, ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ನೇತೃತ್ವದ ಎನ್ಡಿಎಗೆ ಬಹುಮತ ದೊರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು?
ಪಶ್ಚಿಮ ಬಂಗಾಳ
P-MARQ
ಟಿಎಂಸಿ: 118-138
ಬಿಜೆಪಿ: 150-175
ಇತರೆ: 02-06
ಮ್ಯಾಟ್ರೈಜ್
ಟಿಎಂಸಿ: 125-140
ಬಿಜೆಪಿ: 146-161
ಇತರೆ: 6-10
ಚಾಣಾಕ್ಯ ಸ್ಟ್ರಾಟರ್ಜೀಸ್
ಟಿಎಂಸಿ: 130-140
ಬಿಜೆಪಿ: 150-160
ಇತರೆ: 6-10
JVC ಸಮೀಕ್ಷೆ
ಟಿಎಂಸಿ: 131-152
ಬಿಜೆಪಿ: 138-159
ಇತರೆ: 0-4
ಪೀಪಲ್ಸ್ ಪಲ್ಸ್
ಟಿಎಂಸಿ: 177-187
ಬಿಜೆಪಿ: 95-100
ಇತರೆ: 0-1
ತಮಿಳುನಾಡು
ಮ್ಯಾಟ್ರೈಜ್ ಇಂಡಿಯಾ
ಡಿಎಂಕೆ + : 122–132
ಎಐಎಡಿಎಂಕೆ + : 87 – 100
ಟಿವಿಕೆ : 10–12
ಇತರೆ: 00
ಪಿ-ಮಾರ್ಕ್
ಡಿಎಂಕೆ + : 125-145
ಎಐಎಡಿಎಂಕೆ +: 65-85
ಟಿವಿಕೆ : 16-26
ಪಿಎಂಎಆರ್ಕ್ಯೂ
ಡಿಎಂಕೆ + 125-145
ಎಐಎಡಿಎಂಕೆ + 65-85
ಟಿವಿಕೆ 16-26
ಇತರೆ 1-6
ಅಸ್ಸಾಂ:
ಆಕ್ಸಿಸ್ ಮೈ ಇಂಡಿಯಾ
ಕಾಂಗ್ರೆಸ್+: 80–100
ಬಿಜೆಪಿ+: 20–36
ಪಿ– ಮಾರ್ಕ್
ಕಾಂಗ್ರೆಸ್+: 30–40
ಬಿಜೆಪಿ+: 82–94
ಮ್ಯಾಟ್ರಿಜ್
ಕಾಂಗ್ರೆಸ್+: 25–32
ಬಿಜೆಪಿ+: 85–95
ಜೆವಿಎಸ್
ಕಾಂಗ್ರೆಸ್+: 23-33
ಬಿಜೆಪಿ+: 88-101
ವೋಟೆವಿಬ್
ಕಾಂಗ್ರೆಸ್+:23-33
ಬಿಜೆಪಿ+: 90-100
ಕೇರಳ
ಎನ್ಡಿಟಿವಿ
ಎಲ್ಡಿಎಫ್: 55–65
ಯುಡಿಎಫ್: 75–85
ಇತರೆ 0–3
ಆಕ್ಸಿಸ್ ಮೈ ಇಂಡಿಯಾ
ಯುಡಿಎಫ್: 78–90
ಎಲ್ಡಿಎಫ್: 49– 62
ಇತರೆ: 0–3
ಮ್ಯಾಟ್ರಿಕ್
ಯುಡಿಎಫ್: 70–75
ಎಲ್ಡಿಎಫ್: 60–65
ಇತರೆ: 0–4
ಪಿ–ಮಾರ್ಕ್
ಯುಡಿಎಫ್: 72–79
ಎಲ್ಡಿಎಫ್: 62–69
ಇತರೆ: 0–3
ಪುದುಚೇರಿ
ಪೋಲ್ ಆಫ್ ಎಕ್ಸಿಟ್ ಪೋಲ್ಸ್
ಬಿಜೆಪಿ+ : 17
ಕಾಂಗ್ರೆಸ್+: 09
ಇತರೆ: 3
ಆ್ಯಕ್ಸಿಸ್ ಮೈ ಇಂಡಿಯಾ
ಬಿಜೆಪಿ +: 16–20
ಕಾಂಗ್ರೆಸ್ +: 6–8
ಇತರೆ: 3–7
ಪೀಪಲ್ಸ್ ಪ್ಲಸ್
ಬಿಜೆಪಿ+: 16–19
ಕಾಂಗ್ರೆಸ್+: 10–13
ಇತರೆ: 1–2













