ಮೆಕ್ಸಿಕೊ ಸಿಟಿ: ದಕ್ಷಿಣ ಕೊರಿಯಾ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿದ ಮೆಕ್ಸಿಕೊ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಆ ಮೂಲಕ ಮೆಕ್ಸಿಕೊ ವಿಶ್ವಕಪ್ ಫುಟ್ಬಾಲ್ನ ನಾಕೌಟ್ ಹಂತ ಪ್ರವೇಶಿಸಿದ ಮೊದಲ ತಂಡವಾಯಿತು.ಇನ್ನೊಂದು ಪಂದ್ಯದಲ್ಲಿ
ಕೆನಡಾ ತಂಡ ಕತಾರ್ ತಂಡವನ್ನು 6-0 ಗೋಲುಗಳ ಅಂತರದಿಂದ ಮಣಿಸಿದರೆ, ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡ 4-1 ಗೋಲುಗಳಿಂದ ಬೋಸ್ನಿಯಾವನ್ನು ಸೋಲಿಸಿತು.
ಕೆನಡಾದ ಜೊನಾಥನ್ ಡೇವಿಡ್ ಅವರು ಆಕರ್ಷಕ ಹ್ಯಾಟ್ರಿಕ್ ಗೋಲು ಹೊಡೆದು ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ಸೈಲ್ ಲಾರಿನ್ ಮತ್ತು ನಾಥನ್ ಸಲಿಬಾ ತಲಾ ಒಂದು ಗೋಲು ಬಾರಿಸಿದರು.
ಸ್ವಿಟ್ಜರ್ಲೆಂಡ್ ತಂಡ ಬೋಸ್ನಿಯಾವನ್ನು 4-1 ಗೋಲುಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಬೋಸ್ನಿಯಾ ಆಟಗಾರರು ಸ್ವಿಸ್ ಎದುರು ಸುಲಭವಾಗಿ ಮಂಡಿಯೂರಿದರು.
ಕೆಲೆಬ್ ಇರೆಂಕಿ ಗಳಿಸಿದ ಗೋಲಿನಿಂದ ಘಾನಾ ತಂಡವು ಬುಧವಾರ ನಡೆದ ಎಲ್ ಗುಂಪಿನ ಎರಡನೇ ಪಂದ್ಯದಲ್ಲಿ ಪನಾಮಾ ತಂಡವನ್ನು 1–0 ಗೋಲಿನಿಂದ ಸೋಲಿಸಿತು.







