ಬೆಂಗಳೂರು:ವಿಧಾನಸಭೆಯಿಂದ ವಿಧಾನಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಐದು ಅಭ್ಯರ್ಥಿಗಳು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಜೆಡಿಎಸ್ನಿಂದ ಸ್ಪರ್ಧಿಸಿದ್ದ
ಅಭ್ಯರ್ಥಿ ಗೋವಿಂದರಾಜು ಪರಾಭವಗೊಂಡರು.
ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ 30, ಪಿ.ವಿ.ಮೋಹನ್ 29, ಬಿ.ಎಸ್.ಶಿವಣ್ಣ 30, ತಿಪ್ಪಣಪ್ಪ ಕಮಕನೂರ 30 ಮತ್ತು ವಿನಯ್ ಕಾರ್ತಿಕ್ 32 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ರಘು ಕೌಟಿಲ್ಯ 29 ಮತ್ತು ಲಿಂಗರಾಜಪಾಟೀಲ ಅವರು 27 ಮತಗಳಿಸಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧಿಸಿದ್ದ, ಗೋವಿಂದರಾಜು ಅವರು 14 ಮತಗಳನ್ನು ಪಡೆದಿದ್ದಾರೆ.








