ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಕದಿರು ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಕಾರ್ಯಕ್ರಮ ಜೂ.20 ರಂದು ಪೂರ್ವಾಹ್ನ 10.30 ರಿಂದ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೆಸಿಐ ಪಂಜ ಪಂಚಶ್ರೀ, ಭಾರತ್ ಸ್ಕೌಟ್ಸ್ ಸ್ಥಳೀಯ ಸಂಸ್ಥೆಯ
ಸಹಕಾರದಲ್ಲಿ ನಡೆಯುವ ನೇಜಿ ನಾಟಿ ಹಾಗು ಸ್ಕೌಟ್ಸ್, ಗೈಡ್ಸ್ ವಿ ವಿದ್ಯಾರ್ಥಿಗಳಿಗೆ ಬೇಸಾಯದ ಪಾಠ ಕಾರ್ಯಕ್ರಮವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸುವರು. ಜೇಸಿ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ಅಧ್ಯಕ್ಷತೆ ವಹಿಸುವರು. ತೀರ್ಥಾನಂದ ಕೊಡೆಂಕಿರಿ, ಸ್ಮಿತಾ ಹೆಚ್.ಎನ್. ಮಾಹಿತಿ ನೀಡುವರು.







