ಮೈಸೂರು:ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಸ್ತ್ರೀಯ ನೃತ್ಯ ಕಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಾಳೆ(ಅ.14) ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ. ಮೈಸೂರಿನ
ಅರಮನೆ ಮುಂಭಾಗದ ಭವ್ಯ ಸಾಂಸ್ಕೃತಿಕ ವೇದಿಕೆಯಲ್ಲಿ
ನೃತ್ಯ ಗುರು ಡಾ.ಚೇತನಾ ರಾಧಾಕೃಷ್ಣ, ಖ್ಯಾತ ಚಲನಚಿತ್ರ ತಾರೆ ಹಾಗು ಭರತನಾಟ್ಯಂ ನೃತ್ಯ ಕಲಾವಿದೆ ಪಾಯಲ್ ರಾಧಾಕೃಷ್ಣ ನೇತೃತ್ವದಲ್ಲಿ ದಶ ‘ವಿದ್ಯಾಬಾಲ ಭರತನಾಟ್ಯಂ’ಪ್ರದರ್ಶನಗೊಳ್ಳಲಿದೆ. ಡಾ
ಚೇತನಾ ರಾಧಾಕೃಷ್ಣ ನಿರ್ದೇಶನದಲ್ಲಿ

ಗುರುದೇವ ಅಕಾಡೆಮಿಯ 32ಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಾತ್ರಿ 8:30 ರಿಂದ 10 ಗಂಟೆ ತನಕ ನಡೆಯುವ ಭರತನಾಟ್ಯ ಪ್ರದರ್ಶನದಲ್ಲಿ ಗೀತ ಪಂಚಾಮೃತ ಭಗವದ್ಗೀತೆಯ ಶ್ಲೋಕಗಳಿಗೆ ಹಾಗೂ ದೇವಿಯ ಕುರಿತಾದ ದಶ ವಿದ್ಯಾ ಬಾಲ ರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಎಂ.ರಾಧಾಕೃಷ್ಣ ತಿಳಿಸಿದ್ದಾರೆ.










